ADVERTISEMENT

ಬಾಗಲಕೋಟೆ | ಮತದಾರರ ಪಟ್ಟಿಗೆ ಬಾಲಕರ ಸೇರ್ಪಡೆ: ಆರೋಪ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 23:30 IST
Last Updated 26 ಡಿಸೆಂಬರ್ 2025, 23:30 IST
<div class="paragraphs"><p>ಮತದಾರರ ಪಟ್ಟಿ</p></div>

ಮತದಾರರ ಪಟ್ಟಿ

   

– ಎ.ಐ ಚಿತ್ರ

ಬಾಗಲಕೋಟೆ: ‘ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಹುನಗುಂದ ವಿಧಾನಸಭಾ ಕ್ಷೇತ್ರದ ಮುರಡಿ ಗ್ರಾಮದಲ್ಲಿ 18 ವರ್ಷದ ಒಳಗಿನವರನ್ನು ಅನಧಿಕೃತವಾಗಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ’ ಎಂದು ಹುನಗುಂದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಗೌಡರ ಆರೋಪಿಸಿದರು.

ADVERTISEMENT

‘ಮತದಾರರ ‍ಪಟ್ಟಿ ಸೇರ್ಪಡೆ ಸಂದರ್ಭದಲ್ಲಿ ಮುರಡಿ ಗ್ರಾಮದಲ್ಲಿ ಬಾಲಕರ ಹಾಗೂ ಅವರ ‍ಪೋಷಕರ ಮೊಬೈಲ್ ನಂಬರ್ ಬದಲು ಕೆಲವರು ತಮ್ಮ ಮೊಬೈಲ್ ನಂಬರ್ ನೀಡಿ, ಅದಕ್ಕೆ ಒಟಿಪಿ ಬರುವಂತೆ ಮಾಡಿ, ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಈ ರೀತಿಯ ಪ್ರಕ್ರಿಯೆ ನಡೆಯುತ್ತಿರುವುದು ಪೋಷಕರ ಗಮನಕ್ಕೆ ತಡವಾಗಿ ಬಂದಿದ್ದು, ದಾಖಲೆ ಸಮೇತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಕೋರಲಾಗಿತ್ತು’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿ ತಿಳಿಸಿದರು.

‘ಕಾಂಗ್ರೆಸ್‍ ವರಿಷ್ಠ ರಾಹುಲ್ ಗಾಂಧಿ ದೇಶದಾದ್ಯಂತ ಬಿಜೆಪಿ ವಿರುದ್ಧ ವೋಟ್ ಚೋರಿ ಅಭಿಯಾನ ನಡೆಸಿದ್ದಾರೆ. ಆದರೆ, ಇಲ್ಲಿ ಅವರ ಪಕ್ಷದವರೇ ಅನಧಿಕೃತವಾಗಿ ಬಾಲಕರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದ್ದಾರೆ’ ಎಂದು ದೂರಿದರು.

ಈ ಕುರಿತು ಪ್ರತಿಕ್ರಿಯಿಸಿದ ಇಳಕಲ್‌ ತಹಶೀಲ್ದಾರ್ ಅಮರೇಶ ಪಮ್ಮಾರ, ‘ಮತದಾರರ ಪಟ್ಟಿ ನೋಂದಣಿ ವೇಳೆ ಅಪ್‌ಲೋಡ್ ಮಾಡಿದ್ದ ದಾಖಲೆಗಳಲ್ಲಿ 18 ವರ್ಷ ಪೂರ್ಣವಾಗಿರುವ ದಾಖಲೆಗಳನ್ನು ನೀಡಲಾ ಗಿತ್ತು. ಜನಗಣತಿ ವೇಳೆ ಅವರ ವಯಸ್ಸು 18ಕ್ಕಿಂತ ಕಡಿಮೆ ಇರುವುದು ಗೊತ್ತಾದ ಬಳಿಕ ಏಳು ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಇನ್ನಿಬ್ಬರ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಹೆಸರು ಸೇರ್ಪಡೆ ಮಾಡಿದವರು ಯಾರು ಎಂಬ ಬಗ್ಗೆಯೂ ತನಿಖೆ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.