ಮಹಾಲಿಂಗಪುರ: ಕರ ಬಾಕಿ ಉಳಿಸಿಕೊಂಡಿರುವ ಮನೆಗಳ ನಲ್ಲಿ ಸಂಪರ್ಕ ಕಡಿತಗೊಳಿಸಲು ಪಟ್ಟಣದ ಪುರಸಭೆ ಮುಂದಾಗಿದ್ದು, ಶನಿವಾರದಿಂದ ಕಾರ್ಯಾಚರಣೆ ನಡೆಸಿದೆ.
ಕೆಂಗೇರಿಮಡ್ಡಿ, ಬರಗಿ ಬಡಾವಣೆ, ಹುಣಶ್ಯಾಳ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗೆ ತೆರಳಿದ ಸಿಬ್ಬಂದಿ 60ಕ್ಕೂ ಹೆಚ್ಚು ಮನೆಗಳ ನಲ್ಲಿ ಸಂಪರ್ಕ ಕಡಿತಗೊಳಿಸಿದರು. ಅಲ್ಲಲ್ಲಿ ಸಾರ್ವಜನಿಕರು ತಕರಾರು ತೆಗೆದರು. ಬಾಕಿ ಕುರಿತು ಪುರಸಭೆ ಸಿಬ್ಬಂದಿ ಸಮಜಾಯಿಸಿ ನೀಡಿದರು.
ಕಂದಾಯ ಅಧಿಕಾರಿ ಪಿ.ವೈ.ಸೊನ್ನದ ಮಾತನಾಡಿ, ‘ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾರ್ಗದರ್ಶನದಲ್ಲಿ ಕರ ವಸೂಲಿಗೆ ಮೂರು ತಂಡ ರಚಿಸಲಾಗಿದೆ. ನೀರಿನ ಕರ ₹28.26 ಲಕ್ಷ ವಸೂಲಿಯಾಗಿದೆ, ₹ 61.09 ಲಕ್ಷ ಬಾಕಿ ಇದೆ. ಸಂಪನ್ಮೂಲ ಸಂಗ್ರಹ, ನೀರು ಪೂರೈಕೆ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಗೆ ಕರ ಬಾಕಿ ವಸೂಲಿ ಮಾಡಲಾಗುತ್ತಿದೆ’ ಎಂದರು.
ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಎಂ.ಎಂ.ಮುಗಳಖೋಡ, ರಾಜು ಹೂಗಾರ, ಮಾರುತಿ ದಳವಾಯಿ, ಎಸ್.ಜಿ.ಕತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.