ADVERTISEMENT

ನಮ್ಮ ಸಮಸ್ಯೆ ಕೇಳಲಿಲ್ಲ: ಕೇಂದ್ರ ತಂಡದ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 13:00 IST
Last Updated 8 ಸೆಪ್ಟೆಂಬರ್ 2020, 13:00 IST

ಬಾಗಲಕೋಟೆ: ತಮ್ಮ ಸಂಕಷ್ಟ ಆಲಿಸದೇ ತೆರಳಿದ ಕೇಂದ್ರದ ಅಧ್ಯಯನ ತಂಡದ ವಿರುದ್ಧ ಮಂಗಳವಾರ ಬಾದಾಮಿ ತಾಲ್ಲೂಕಿನ ಗೋವನಕೊಪ್ಪದ ನೆರೆ ಸಂತ್ರಸ್ತರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು. ಹಿಡಿಶಾಪ ಹಾಕಿದರು.

ಹೀಗೆ ಬಂದು ಹಾಗೆ ಹೋದ್ರೆ ಹ್ಯಾಂಗೆ, ನಮ್ಮ ಸಮಸ್ಯೆ ಆಲಿಸದೇ ಹೋದರೆ ಹೇಗೆ ಎಂದು ಪ್ರಶ್ನಿಸಿದರು.

ಮಲಪ್ರಭಾ ನದಿ ಪ್ರವಾಹಕ್ಕೆ ಪದೇ ಪದೇ ಸಿಲುಕುವ ನಮ್ಮೂರು ಸ್ಥಳಾಂತರಿಸಿ,ಬೆಳೆ ಹಾನಿಗೆ ಪರಿಹಾರ ಕೊಡಿ, ನದಿ ಒತ್ತುವರಿ ತೆರವುಗೊಳಿಸಿ ಎಂದು ಗ್ರಾಮಸ್ಥರ ಆಗ್ರಹಿಸಿದರು.

ADVERTISEMENT

ಕೇಂದ್ರ ಅಧ್ಯಯನ ತಂಡದ ಎದುರು ಸಮಸ್ಯೆ ಹೇಳೋಕೆ ಪೊಲೀಸರು ಬಿಡಲಿಲ್ಲ ಎಂದು ಆರೋಪಿಸಿದರು.

ಕೇಂದ್ರದಿಂದ ಬಂದಿದ್ದಾರಂತೆ. ಯಾವುದಕ್ಕೆ ಬಂದಾರ, ಕಾರಿನಲ್ಲಿ ಹತ್ತಿ ಹೋಗುವುದಲ್ಲ, ಸಮಸ್ಯೆ ಆಲಿಸಲಿಲ್ಲ ಎಂದು ಹೇಳಿದರು.

ಗೋವನಕೊಪ್ಪ ಗ್ರಾಮದ ಹಳೆ ಸೇತುವೆ, ಬೆಳೆ, ರಸ್ತೆ ಹಾನಿ ವೀಕ್ಷಿಸಿ ಅಧ್ಯಯನ ತಂಡ ಮರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.