ADVERTISEMENT

ಬಾಗಲಕೋಟೆ: 25 ದಿನಗಳಲ್ಲಿ ₹56.90 ಲಕ್ಷ ವಂಚನೆ

ಹೆಚ್ಚಿನ ಲಾಭದ ಆಸೆ ತೋರಿಸಿ ರೈಲ್ವೆ ನೌಕರಗೆ ಮೋಸ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:00 IST
Last Updated 27 ಡಿಸೆಂಬರ್ 2025, 7:00 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬಾಗಲಕೋಟೆ: ವ್ಯಾಟ್ಸ್ ಆ್ಯಪ್‌ಗಳಿಗೆ ಲಿಂಕ್‌ ಗಳಿಸಿ ಹೆಚ್ಚಿನ ಹಣದ ಆಮಿಷ ತೋರಿಸಿ ವಂಚನೆ ಪ್ರಕರಣಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ, ಅಲ್ಲಲ್ಲಿ ಜನರು ಮೋಸ ಹೋಗುತ್ತಲೇ ಇರುತ್ತಾರೆ. ಅಂತಹದೇ ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು, ₹56.90 ಲಕ್ಷ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ.

ಷೇರುಗಳಲ್ಲಿ ಹೂಡಿಕೆ ಲಾಭ ಮಾಡಿಕೊಡುವುದಾಗಿ ನಂಬಿಸಿ ರೈಲ್ವೆ ಉದ್ಯೋಗಿಯಿಂದ 25 ದಿನಗಳಲ್ಲಿ ₹56.90 ಲಕ್ಷ ಮೊತ್ತವನ್ನು ಆರೋಪಿಗಳು ತಮ್ಮ ವಿವಿಧ ಖಾತೆಗಳಿಗೆ ಜಮಾ ಮಾಡಿಸಿಕೊಂಡು, ನಂತರ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ವಂಚನೆಗೆ ಒಳಗಾದ ವ್ಯಕ್ತಿಗೆ ಅ.20ರಂದು ಫೇಸ್‌ಬುಕ್‌ನಲ್ಲಿರುವ ಬ್ಲಾಕ್‌ ಟ್ರೇಡಿಂಗ ಆ್ಯಂಡ್ ಪ್ರಿ ಐಪಿಒ ಮೂಲಕ ಲಿಂಕ್‌ವೊಂದನ್ನು ಕಳುಹಿಸಿದ್ದರು. ಅದಕ್ಕೆ ಇವರು ಜಾಯಿನ್ ಆಗಿದ್ದರು.

ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಜಾಯಿನ್‌ ಆದ ಮೇಲೆ ಷೇರುಗಳ ಮೇಲೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಮಾಡಿಕೊಡಲಾಗುವುದು ಎಂದು ಆರೋಪಿಗಳು ದೂರುದಾರರನ್ನು ನಂಬಿಸಿತ್ತಾರೆ. 

ಆರೋಪಿಗಳ ಹೇಳಿಕೆ ನಂಬಿದ ದೂರುದಾರರು, ತಮ್ಮ ವಿವಿಧ ಬ್ಯಾಂಕ್‌ ಖಾತೆಗಳಿಂದ ಆರೋಪಿಗಳು ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ 12 ದಿನಗಳಲ್ಲಿಯೇ ₹21.10 ಲಕ್ಷ ವರ್ಗಾವಣೆ ಮಾಡುತ್ತಾರೆ.

ಆರೋಪಿಗಳು ಲಾಭದ ಬಗ್ಗೆ ಹೇಳುವ ಮಾತುಗಳನ್ನು ಕೇಳಿ ತಮ್ಮ ಪತ್ನಿಯ ಬ್ಯಾಂಕಿನಿಂದ 14 ದಿನಗಳಲ್ಲಿ ವಿವಿಧ ಬ್ಯಾಂಕ್‌ಗಳಿಗೆ ₹35.80 ಲಕ್ಷ ವರ್ಗಾವಣೆ ಮಾಡುತ್ತಾರೆ.

ಲಾಭದ ಬಗ್ಗೆ ಕೇಳಿದಾಗ ಆರೋಪಿಗಳು ಸಂಪರ್ಕ ಕಡೆದುಕೊಂಡಿದ್ದು, ಹಣ ಮರಳಿಸದೇ ವಂಚನೆ ಮಾಡಿದ್ದಾರೆ ಎಂದು ಬಾದಾಮಿಯಲ್ಲಿ ವಾಸಿಸುವ ದೂರುದಾರರು ಬಾಗಲಕೋಟೆ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.