ADVERTISEMENT

ಲೋಕಾಪುರ: ‘ಕಾರ್ಖಾನೆ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:41 IST
Last Updated 7 ಜೂನ್ 2025, 13:41 IST
ಲೋಕಾಪುರ ಸಮೀಪದ ತಿಮ್ಮಾಪೂರ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮುಖಂಡ ಎಸ್. ಆರ್.ಪಾಟೀಲ   ಸಸಿ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿದರು 
ಲೋಕಾಪುರ ಸಮೀಪದ ತಿಮ್ಮಾಪೂರ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮುಖಂಡ ಎಸ್. ಆರ್.ಪಾಟೀಲ   ಸಸಿ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿದರು    

ಲೋಕಾಪುರ: ’ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ‘ ಎಂದು ಕಾಂಗ್ರೆಸ್ ಮುಖಂಡ ಬೀಳಗಿ ಶುಗರ್ಸ್‌ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಸಮೀಪದ ತಿಮ್ಮಾಪೂರ ಗ್ರಾಮದ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ, ಕಾರ್ಮಿಕ ಕುಟುಂಬ ದಿನಾಚರಣೆ ಮತ್ತು ಗೀತಾಂಜಲಿ ತಾರಾ ಬಳಗ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

‘ಕಾರ್ಖಾನೆಯ ಆರ್ಥಿಕ ಪರಿಸ್ಧಿತಿ ಸದೃಢಗೊಳ್ಳಲು ಎಲ್ಲ ಕಾರ್ಮಿಕರ ಪರಿಶ್ರಮ ಅಪಾರವಾಗಿದೆ. ಕಾರ್ಖಾನೆಯ ಆರ್ಥಿಕ ಸ್ಧಿತಿ ಬಲಗೊಂಡಾಗ ಮಾತ್ರ ಸಹಕಾರ ಕ್ಷೇತ್ರಕ್ಕೆ ಬಲ ಬರುತ್ತದೆ’ ಎಂದರು. 

ADVERTISEMENT

ಮಾನವ ಸಂಪನ್ಮೂಲ ಅಭಿವೃದ್ದಿ ಅಧಿಕಾರಿ ಮಾಧವರಾವ ಜೋಷಿ ಮಾತನಾಡಿ, ‘ಮುಚ್ಚಿದ್ದ ಕಾರ್ಖಾನೆಯನ್ನು ಎಸ್.ಆರ್. ಪಾಟೀಲ ಅವರ ನೇತೃತ್ವದಲ್ಲಿ ಪುನಚ್ಚೇತನಗೊಳಿಸಿ ರೈತರ, ಕಾರ್ಮಿಕರ ಹಿತ ಕಾಪಾಡಲಾಗಿದೆ’ ಎಂದು ತಿಳಿಸಿದರು.  

ಬೀಳಗಿ ಶುಗರ್ಸ ನಿರ್ದೇಶ  ಸುರೇಶಗೌಡ ಪಾಟೀಲ, ಹಣಮಂತಗೌಡ ಪಾಟೀಲ, ವಿಠಲ್ ತುಂಬರಮಟ್ಟಿ, ಮಂಜುನಾಥ ಅರಳಿಕಟ್ಟಿ, ಕಾರ್ಖಾನೆ ಅಧಿಕಾರಿಗಳಾದ ಆರ್.ಎಂ.ಪಾಟೀಲ, ಬಸವರಾಜ ಹುಣಸಿ, ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಬಿ.ಜಿ.ಪಾಟೀಲ, ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಎಸ್.ಜಿ.ಗುರವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.