ADVERTISEMENT

ಜಂತುಹುಳು ಸೋಂಕಿನಿಂದ ಮಕ್ಕಳ ಬೆಳವಣಿಗೆ ಕುಂಠಿತ: ಕೆ.ಎಫ್.ಮಾಯಾಚಾರಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:18 IST
Last Updated 12 ಫೆಬ್ರುವರಿ 2026, 6:18 IST
ಮಲ್ಲಾಪೂರ ಶಾಲೆಯಲ್ಲಿ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡಲಾಯಿತು
ಮಲ್ಲಾಪೂರ ಶಾಲೆಯಲ್ಲಿ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡಲಾಯಿತು   

ರಾಂಪುರ: ‘ಜಂತುಹುಳು ಸೋಂಕು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಅವರ ಬೆಳವಣಿಗೆ ಕುಂಠಿತಗೊಳ್ಳುತ್ತದೆ’ ಎಂದು ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್.ಮಾಯಾಚಾರಿ ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿರೂರ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪೂರದಲ್ಲಿ ಮಂಗಳವಾರ ಹಮ್ಮಿಕೊಂಡ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಂತುಹುಳು ಸೋಂಕು ಮಕ್ಕಳನ್ನು ರಕ್ತಹೀನರನ್ನಾಗಿಸುವುದಲ್ಲದೇ ದೇಹದಲ್ಲಿ ಪೌಷ್ಟಿಕಾಂಶ ದೊರೆಯದಂತೆ ಮಾಡುತ್ತದೆ. ಇದನ್ನು ಹೋಗಲಾಡಿಸಲು ಅಲ್ಬೆಂಡಾಝೋಲ್ ಮಾತ್ರೆಯನ್ನು ಸೇವಿಸಬೇಕು. ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಬೇಕು’ ಎಂದು ಹೇಳಿದರು

ADVERTISEMENT

‘ಈ ಸೊಂಕು ಮಹಿಳೆ ಮತ್ತು ಮಕ್ಕಳಲ್ಲಿ ಅಧಿಕವಾಗಿ ಕಂಡುಬರುತ್ತಿದ್ದು, 1 ರಿಂದ 19 ವರ್ಷದೊಳಗಿನ ಪ್ರತಿಯೊಬ್ಬರು 6 ತಿಂಗಳಿಗೊಮ್ಮೆ ಆರೋಗ್ಯ ಇಲಾಖೆ ನೀಡುವ ಈ ಮಾತ್ರೆಯನ್ನು ಸೇವಿಸಬೇಕು’ ಎಂದರು.

ಆರೋಗ್ಯ ಸುರಕ್ಷಾಧಿಕಾರಿ ಎಸ್. ಎಸ್.ಮೆಣಸಗಿ, ಮಕ್ಕಳಿಗೆ ಕೈ ತೊಳೆಯುವ ವಿಧಾನದ ಪ್ರಾತ್ಯಕ್ಷಿಕೆ ತೋರಿಸಿದರು.

ಶಾಲೆಯ ಮುಖ್ಯಶಿಕ್ಷಕ ಬಿ.ಎ.ಹೂಗಾರ ಹಾಗೂ ವೈ.ಡಿ. ಕಿರಸೂರ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿದರು.

ಶಿಕ್ಷಕರಾದ ವಿ.ಕೆ.ಬಾಗಲಕೋಟ, ಕೆ.ಡಬ್ಲ್ಯೂ.ಲಮಾಣಿ, ಎಚ್. ಎಲ್.ಲಮಾಣಿ, ಎಸ್.ಕೆ.ಅಂಬೇಕರ, ಎಸ್.ಎನ್.ಹಾವರಗಿ, ಎಸ್.ಎಸ್.ಪಾಟೀಲ, ಬಿ.ಕೆ.ದಾಸರ, ಎಸ್.ಜಿ.ಜೋಶಿ, ಸವಿತಾ ತಂಬಾಕದ, ಆಶಾ ಕಾರ್ಯಕರ್ತೆ ಅನಿತಾ ರಾಜನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.