ಕೂಡ್ಲಿಗಿ: ಪಟ್ಟಣದ ರಾಜೀವ್ ಗಾಂಧಿ ನಗರ ಹಾಗೂ ಶ್ರಿ ಚಿದಂಬರೇಶ್ವರ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಚತುರ್ಥಿ ಪ್ರಯುಕ್ತ ಮಂಗಳವಾರ ವಿಶೇಸ ಪೂಜೆ ಏರ್ಪಡಿಸಲಾಗಿತ್ತು.
ಪೂಜೆಯ ಅಂಗವಾಗಿ ರಾಜೀವ್ ಗಾಂಧಿ ನಗರದ ಶ್ರಿ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ 21 ತೆಂಗಿನಕಾಯಿ ಅಷ್ಟದ್ರವ್ಯ ಮಹಾ ಗಣಪತಿ ಹೋಮ ಹಾಗೂ ವಿಶೇಷ ಅಲಂಕಾರ ಪೂಜೆ ಯನ್ನು ಏರ್ಪಡಿಸಲಾಗಿತ್ತು. ಗಣಪತಿಗೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ, ವಿಶೇಷ ಪೂಜೆಯನ್ನು ನಡೆಸಲಾಯಿತು.
ಶ್ರಿ ಚಿದಂಬರೇಶ್ವರ ದೇವಸ್ಥಾನದ್ಲ್ಲಲಿ ಅಂಗಾರಕ ಸಂಕಷ್ಟದ ಅಂಗವಾಗಿ ವಿಶೇಷ ಪೂಜೆ ಹಾಗೂ ಗಣಹೋಮ ವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿ.ಪಿ. ಕೃಷ್ಣಮೂರ್ತಿ, ಕೆಎಸ್‌ಆರ್‌ಟಿಸಿ ಭರಮಣ್ಣ, ಅನಂತಪದ್ಮನಾಭ ಶ್ರೇಷ್ಠಿ, ಸತ್ಯನಾರಾಯಣ ಶ್ರೇಷ್ಠಿ, ಸಂಗಯ್ಯ ಹಿರೇಮಠ, ನಾಗೇಶ, ಡಿ.ಅಜ್ಜಯ್ಯ ಮುಂತಾದವರು ಉಪಸ್ಥಿತರಿದ್ದರು.
ರಂಗನಾಥ ಭಾರದ್ವಾಜ, ಪ್ರಹ್ಲಾದ ಜೋಶಿ ಹೋಮದ ಪೌರೋಹಿತ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.