ADVERTISEMENT

ಅದ್ದೂರಿ ಆಂಜನೇಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:54 IST
Last Updated 17 ಮಾರ್ಚ್ 2014, 9:54 IST

ಮರಿಯಮ್ಮನಹಳ್ಳಿ: ಸಮೀಪದ ಚಿಲಕನ ಹಟ್ಟಿ ಬಳಿಯ ಹಾರುವನಹಳ್ಳಿ ಆಂಜ ನೇಯ ಸ್ವಾಮಿಯ ರಥೋತ್ಸವ ಭಾನು ವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಪ್ರತಿವರ್ಷದಲ್ಲಿ ಹೋಳಿ ಹುಣ್ಣಿ ಮೆಯ ದಿನದಂದು ಜರುಗುವ ರಥೋ ತ್ಸವದ ಅಂಗವಾಗಿ ಬೆಳಿಗ್ಗೆ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ಪುನಸ್ಕಾರಗಳು ಸೇರಿದಂತೆ ವಿವಿದ ಧಾರ್ಮಿಕ ವಿದಿವಿಧಾನಗಳು ಜರುಗಿ ದವು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 13ರ ಬದಿಯಲ್ಲಿಯೇ ನೆಲೆ ನಿಂತಿರುವು ದರಿಂದ ಆಂಜನೇಯ ಸ್ವಾಮಿಗೆ ಗ್ರಾಮಸ್ಥರು ಮಾರ್ಗದಯ್ಯ ಎಂದು ಕರೆಯುತ್ತಾರೆ.

ಸ್ಥಳೀಯ ಭಕ್ತರು ಸೇರಿದಂತೆ ವಿವಿಧೆ ಡೆಗಳಿಂದ ಆಗಮಿಸಿದ ಭಕ್ತರು ಬೆಳಿಗ್ಗೆ ಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹಣ್ಣುಕಾಯಿ ಅರ್ಪಿಸಿ ದರು. ಕಳೆದ ವರ್ಷ ರಥೋತ್ಸವ ಸಮಯದಲ್ಲಿ ಹರಾಜಿನಲ್ಲಿ ಪಟಪಡೆದ ಭಕ್ತರು ದೇವಸ್ಥಾನಕ್ಕೆ ಭೇಟಿ ಹರಾಜಿನ ಮೊತ್ತದೊಂದಿಗೆ ದೇವಸ್ಥಾನದ ಸಮಿತಿಗೆ ಒಪ್ಪಿಸಿದರು.

ವಿವಿದ ಗೊಂಬೆ, ತಳಿರು ತೋರಣ ಗಳಿಂದ ಅಲಂಕೃತಗೊಂಡ ರಥಕ್ಕೆ ಸಂಜೆ ಐದಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡ ಲಾಯಿತು. ಈ ಸಂದರ್ಭದಲ್ಲಿ ಸ್ವಾಮಿಯ ಪಟ್ಟ ಹರಾಜು ನಡೆಯಿತು. ಹರಾಜಿನಲ್ಲಿ ಗಿರೆನಳ್ಳಿಯ ಚನ್ನಪ್ಪ 39,101ರೂಪಾಯಿಗಳಿಗೆ ಪಟವನ್ನು ಪಡೆದರು. ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಭಕ್ತರು ರಥಕ್ಕೆ ಹೂವುಹಣ್ಣು ಎಸೆದು ಪುನೀತರಾದರು.

ರಥ ಸಾಗುವದನ್ನು ನೋಡಲು ಹೆದ್ದಾರಿಯ ಎರಡು ಬದಿಗಳಲ್ಲಿ ಭಕ್ತರು ಸಾಲಾಗಿ ನಿಂತು ವೀಕ್ಷಿಸಿದರು. ಸ್ವಾಮಿಯ ಜಯಘೋಷಗಳೊಂದಿಗೆ ರಥವನ್ನು ದೂರದ ಪಾದಗಟ್ಟೆವರೆಗೆ ಎಳೆದು ನಂತರ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ರಥೋತ್ಸವದಲ್ಲಿ ಸ್ಥಳೀ ಯರು ಸೇರಿದಂತೆ ಹಾರುವನಹಳ್ಳಿ, ತಿಮ್ಮಲಾಪುರ, ತಾಳೆಬಸಾಪುರ, ತಾಳೇಬಸಾಪುರ ತಾಂಡಾ, ಪೋತಲ ಕಟ್ಟೆ, ದೇವಲಾಪುರ, ಮರಿಯಮ್ಮನ ಹಳ್ಳಿ ಸೇರಿದಂತೆ ವಿವಿದೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಟ್ರಾಫಿಕ್‌ ಜಾಮ್‌: ಹಾರುವನಹಳ್ಳಿ ಆಂಜನೇಯ ಸ್ವಾಮಿಯ ರಥೋತ್ಸವ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಜರುಗಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ನಿರ್ಮಾವಾಗಿ ಹೆದ್ದಾರಿಯ ಎರಡು ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿದ್ದವು. ಯಾವುದೆ ಅಹಿತಕರ ಘಟನೆಗಳು ಜರುಗದಂತೆ ಪಟ್ಟಣದ ಪೊಲೀಸ್‌ ಠಾಣೆಯ ಪಿಎಸ್‌ಐ ಎಸ್‌.ಸುರೇಶ್‌ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.