ADVERTISEMENT

ಆಹಾರ ಇಲಾಖೆ ಸಿಬ್ಬಂದಿ ಮನೆಗೆ ದಾಳಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 10:25 IST
Last Updated 18 ಮಾರ್ಚ್ 2011, 10:25 IST

ಮರಿಯಮ್ಮನಹಳ್ಳಿ: ಕೊಪ್ಪಳದ ಆಹಾರ ಇಲಾಖೆಯ ಗೋದಾಮು ವ್ಯವಸ್ಥಾಪಕರ ಸ್ಥಳೀಯ ನಿವಾಸದ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನೆಡೆಸಿದರು.

ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಆಶೋಕ್ ಸದಲಗಿ ಮತ್ತು ಅವರ ನೇತೃತ್ವದ ಸುಮಾರು 10ಜನರ ತಂಡ ನಸುಕಿನಲ್ಲಿ ಕೊಪ್ಪಳದ ಆಹಾರ ಇಲಾಖೆಯ ಗೋದಾಮು ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಎಲ್. ಏಕಾಂಬರೇಶ್‌ರ ಸ್ಥಳೀಯ ನಿವಾಸ ಮತ್ತು ಅವರ ದಾಖಲೆಗಳಿಗಾಗಿ ಹಾಗೂ ಇತರೆ ಮಾಹಿತಿಗಾಗಿ ಮರಿಯಮ್ಮನಹಳ್ಳಿ ತಾಂಡಾದ ಅವರ ಸಹೋದರನ ಮನೆಯ ಮೇಲೆ ಸಹ ಏಕಕಾಲಕ್ಕೆ ದಾಳಿ ನಡೆಸಿದರು.

ಲೋಕಾಯುಕ್ತ ಅಧಿಕಾರಿಗಳು ಏಕಾಂಬರೇಶ್ ನಾಯ್ಕ ಅವರಿಂದ ಮಹತ್ವದ ದಾಖಲೆಪತ್ರಗಳನ್ನು ಹಾಗೂ ಇತರೆ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಏಕಾಂಬರೇಶ್ ಅವರ ಸ್ಥಳೀಯ ನಿವಾಸ ಹಾಗೂ ಅವರ ಕೊಪ್ಪಳದ ಕಚೇರಿ ಮತ್ತು ಹೊಸಪೇಟೆಯ ಇತರೆ ನಾಲ್ಕು ನಿವಾಸಗಳ ಮೇಲೆ ದೂರಿನ ಮೇರೆಗೆ ಏಕಕಾಲಕ್ಕೆ ದಾಳಿ ನೆಡೆಸಿ ತನಿಖೆ ನೆಡೆಸುತ್ತಿರುವುದಾಗಿ ಡಿವೈಎಸ್ಪಿ ಸಿ.ಬಿ. ಪಾಟೇಲ್ ಸುದ್ದಿಗಾರರಿಗೆ ತಿಳಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.
ಪಿಎಸ್‌ಐ ಚಿಟಗುಬ್ಬಿ, ಚಾಲಕರಾದ ಹೊನ್ನೂರು ಸ್ವಾಮಿ, ಬದ್ರಿನಾರಾಯಣ    ನಾಯ್ಕ ಸೇರಿದಂತೆ ಇತರೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.