ADVERTISEMENT

ಇದ್ದೂ ಇಲ್ಲದಂತಾದ ಉದ್ಯಾನಗಳು!

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 10:00 IST
Last Updated 22 ಜೂನ್ 2013, 10:00 IST

ಕೊಟ್ಟೂರು: ಪಟ್ಟಣದಲ್ಲಿನ ಉದ್ಯಾನವನಗಳಿಗೆ ಪಟ್ಟಣ ಪಂಚಾಯಿತಿಯು ಆವರಣಗೋಡೆ ನಿರ್ಮಿಸಿದೆ. ಆದರೆ, ಉದ್ಯಾನವನಗಳ ಸಮರ್ಪಕ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಪಟ್ಟಣದ ಬಸವೇಶ್ವರ ಬಡಾವಣೆ, ಎಲ್.ಬಿ. ಶಾಸ್ತ್ರಿ ಬಡಾವಣೆ, ಮರಿಕೊಟ್ಟೂರೇಶ್ವರ ಬಡಾವಣೆ, ವಿದ್ಯಾನಗರ, ನೇಕಾರ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಉದ್ಯಾನವನಗಳಿಗೆ ಆವರಣಗೋಡೆ ನಿರ್ಮಿಸಲಾಗಿದೆ.

ಆದರೆ, ಈ ಉದ್ಯಾನವನಗಳು ಜಾಲಿ ಗಿಡಗಳಿಂದಲೇ ತುಂಬಿವೆ. ಅಲ್ಲದೇ, ಹಂದಿ, ನಾಯಿಗಳ ತಾಣವಾಗಿ ಪರಿವರ್ತನೆಗೊಂಡಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಈ ಉದ್ಯಾನವನಗಳ ಸುತ್ತಮುತ್ತ ವಾಸಿಸುವ ಜನರು ದೂರುತ್ತಿದ್ದಾರೆ.

ಉದ್ಯಾನವನದಲ್ಲಿ ವಿದ್ಯುತ್ ದೀಪಗಳು, ನೀರಿನ ಸೌಲಭ್ಯ ಕಲ್ಪಿಸಬೇಕು. ಹೂ ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸುವ ಮೂಲಕ ವಾಯು ವಿಹಾರ ಮತ್ತು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು. ಜೊತೆಗೆ ಮಕ್ಕಳು ಆಟವಾಡುವಂತಹ ಸಾಧನಗಳನ್ನು ಅಳವಡಿಸಬೇಕು ಎಂಬುದೂ ಜನರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.