ADVERTISEMENT

ಉಪ ತಹಶೀಲ್ದಾರ್ ಮದುವೆಯಲ್ಲಿ ಮತದ ಮಾತು

​ಪ್ರಜಾವಾಣಿ ವಾರ್ತೆ
Published 7 ಮೇ 2018, 8:19 IST
Last Updated 7 ಮೇ 2018, 8:19 IST
ಹಗರಿಬೊಮ್ಮನಹಳ್ಳಿಯ ಪಂಚಮಸಾಲಿ ಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮದುಮಗ ಉಪತಹಶೀಲ್ದಾರ್ ಎಚ್‌.ನಾಗರಾಜ್‌ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು
ಹಗರಿಬೊಮ್ಮನಹಳ್ಳಿಯ ಪಂಚಮಸಾಲಿ ಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮದುಮಗ ಉಪತಹಶೀಲ್ದಾರ್ ಎಚ್‌.ನಾಗರಾಜ್‌ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು   

ಹಗರಿಬೊಮ್ಮನಹಳ್ಳಿ: ಇಲ್ಲಿನ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಡ್ಡಾಯ ಮತದಾನದ  ಚರ್ಚೆ ನಡೆಯಿತು.  ಮದುವೆಗೆ ಬಂದವರಿಗೆ ನವದಂಪತಿ ವೋಟ್‌ ಹಾಕುವಂತೆ ಮನವಿ ಮಾಡಿದರು.

ಪಟ್ಟಣದ ಉಪ ತಹಶೀಲ್ದಾರ್ ಎಚ್.ನಾಗರಾಜ್‌ ಅವರು ಪೂಜಾ ಅವರೊಂದಿಗೆ ಮತದಾನದ ಜಾಗೃತಿ ಮೂಡಿಸುವ ಮೂಲಕ ಸಪ್ತಪದಿ ತುಳಿದರು.

ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜನರಿಗೆ ಮದುವೆ ಪ್ರೇರಣೆ ನೀಡಿತು. ಇವಿಎಂ, ವಿವಿಪ್ಯಾಟ್ ಮಾಹಿತಿಯನ್ನೂ ಸಭಾಂಗಣದ ಹೊರಗೆ ನೀಡಲಾಯಿತು.

ADVERTISEMENT

ಮೈಕ್ ಹಿಡಿದು ಮಾತನಾಡಿದ ಮದುಮಗ, ‘ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಹಕ್ಕು ಚಲಾಯಿಸಿ ಜನಪ್ರತಿನಿಧಿಯನ್ನು ಆಯ್ಕೆಮಾಡಬೇಕು ಎಂದರು.

ವಧು ಪೂಜಾ ನಗುಮೊಗದೊಂದಿಗೆ ಪತಿ ಹೇಳಿದ ಮಾತುಗಳಿಗೆ ಸಮ್ಮತಿ ಸೂಚಿಸಿದರು. ಮದುವೆಗೆ ಬಂದವರಿಗೆ ಮತದಾನ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು.

ತಹಶೀಲ್ದಾರ್ ಎಸ್‌.ಮಹಾಬಲೇಶ್ವರ, ನೀತಿ ಸಂಹಿತೆ ಪಾಲನೆ ತಂಡದ ಮುಖ್ಯಸ್ಥ ಬಿ.ಮಲ್ಲಾನಾಯ್ಕ, ಲೆಕ್ಕಪತ್ರ ಉಪ ವೀಕ್ಷಕ ಡಕಣಾನಾಯ್ಕ, ಸಿಬ್ಬಂದಿ ಸಿ.ಎಂ.ಗುರುಬಸವರಾಜ,ಆಸೀಫ್ ಅಲಿ, ಚೇತನ್, ಶಿವಕುಮಾರಗೌಡ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಾಹಕ್ಕೆ ಸಾಕ್ಷಿಯಾದರು.

**
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಮತದಾನ ಆಗಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಅದಕ್ಕಾಗಿಯೇ ಮದುವೆಯಲ್ಲಿ ಈ ವಿನೂತನ ಪ್ರಯತ್ನ
– ಎಚ್‌.ನಾಗರಾಜ, ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.