ADVERTISEMENT

ಗಣತಿ ಕಾರ್ಯ: ಸಹಕರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 8:15 IST
Last Updated 8 ಫೆಬ್ರುವರಿ 2012, 8:15 IST

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಕಾರ್ಯವನ್ನು ಹಮ್ಮಿಕೊಳ್ಳ ಲಾಗಿದ್ದು, ಮಾಹಿತಿ ಸಂಗ್ರಹಿಸಲು ಮನೆಗಳಿಗೆ ಬರುವ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸುವಂತೆ ಪೌರಾಯುಕ್ತ ಡಿ.ಎಲ್. ನಾರಾಯಣ್  ಮನವಿ ಮಾಡಿದ್ದಾರೆ.

ಜನವರಿ 10ರಿಂದಲೇ ಗಣತಿಕಾರ್ಯ ಆರಂಭಿಸಲಾಗಿದ್ದು, ಇದಕ್ಕಾಗಿ 8 ಜನ  ಚಾರ್ಜ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ವಾರ್ಡ್‌ವಾರು ಚಾರ್ಜ್ ಅಧಿಕಾರಿಗಳ ಹಾಗೂ ದೂರವಾಣಿ ಸಂಖ್ಯೆಯ ವಿವರ ಈ ಕೆಳಕಂಡಂತಿದೆ.

1ರಿಂದ 4ನೇ ವಾರ್ಡ್: ಮಹಮ್ಮದ್ ಫಿರೋಜ್- (94481- 40186),  5ರಿಂದ 8ನೇ ವಾರ್ಡ್: ಮಹಮ್ಮದ್ ಆರಿಫುದ್ದೀನ್- (94486- 32234), 9ರಿಂದ 12ನೇ ವಾರ್ಡ್: ಖಾಜಿ ಖಾಜಾ ಹುಸೇನ್-(80956- 65078), 13ರಿಂದ 16ನೇ ವಾರ್ಡ್: ಎಸ್.ಎಂ. ರಫೀಕ್- (94485- 52269), 17ರಿಂದ 20ನೇ ವಾರ್ಡ್: ಕೆ. ಶ್ರಿನಿವಾಸ್- (94491- 33610), 21ರಿಂದ 25ನೇ ವಾರ್ಡ್: ಗುರುಬಸವರಾಜ್- (9483414599), 26ರಿಂದ 30ನೇ ವಾರ್ಡ್: ಎಸ್. ರಾಜೇಂದ್ರ- (94486- 54262) ಹಾಗೂ 31ರಿಂದ 35ನೇ ವಾರ್ಡ್: ಎ. ಹೊನ್ನೂರಪ್ಪ- (94499- 50900). ಸಾರ್ವಜನಿಕರು ದೂರುಗಳಿದ್ದಲ್ಲಿ ಸಂಬಂಧಿಸಿದ ಚಾರ್ಜ್ ಅಧಿಕಾರಿಗಳು ಅಥವಾ  ದೂರು ಕೇಂದ್ರದ ದೂರವಾಣಿ 273479, 273477 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.