ಹೂವಿನಹಡಗಲಿ: ಪಟ್ಟಣದ ತೇರು ಹನುಮಪ್ಪ ಬಯಲು ಜಾಗದಲ್ಲಿ ಶುಕ್ರವಾರ ಜೆಸಿ ಹೂವಿನಹಡಗಲಿ ರಾಯಲ್ಸ್‌ನವರು ಪರಿಸರ ಉಳಿಸಲು ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಬ್ಯಾನರ್‌ನಲ್ಲಿ ಸಹಿ ಸಂಗ್ರಹ ಮಾಡಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಕ.ಸಾ.ಪ.ಅಧ್ಯಕ್ಷೆ ಕೌಸಲ್ಯಾ ದೇವೇಂದ್ರನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರ ಉಳಿಸದಿದ್ದರೆ ಬದುಕು ಉಳಿಯುವುದು ಕಷ್ಟ ಇದು ಎಲ್ಲರೂ ಅರಿತು ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದರು.
ಗಾಳಿ, ಬೆಳಕು, ನೀರು ಕಲುಷಿತ ವಾಗಿದ್ದು ಅವುಗಳನ್ನು ಶುದ್ಧವಾಗಿರಿಸಿ ಭವಿಷ್ಯತ್ತಿನ ಜನರಿಗೆ ಉಳಿಸಿ ಕೊಡಬೇಕಾಗಿದೆ ಎಂದರು.
ಜೆಸಿ ಹೂವಿನಹಡಗಲಿ ರಾಯಲ್ಸ್‌ನ ಅಧ್ಯಕ್ಷ ಎಚ್.ಸ್ವಾಮಿ ಮಾತನಾಡಿ ಪರಿಸರ ನಾಶದಿಂದಾಗಿ ಭೂಮಿ ಮೇಲಿನ ತಾಪಮಾನ ಹೆಚ್ಚಾಗಿ ಅನಾಹುತಗಳಿಗೆ ನಾಂದಿಯಾಗುತ್ತಿದೆ ಎಂದರು.
ಒಂದೊಂದು ಹನಿ ನೀರು ಕೂಡ ಮುಖ್ಯ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಡಾ.ಕೊಟ್ರಮ್ಮ, ಡಾ.ಲಕ್ಷ್ಮಣ್‌ನಾಯ್ಕ, ಹಿತೇಶ್, ಮಂಜುನಾಥಶೆಟ್ಟಿ, ಕೃಷ್ಣರೆಡ್ಡಿ, ಪತ್ರಕರ್ತರಾದ ನಿಂಗಪ್ಪ, ಚಂದ್ರಪ್ಪ ಹಾಗೂ ಜೆಸಿ ಬಳಗದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.