ADVERTISEMENT

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪಾರ್ವತಮ್ಮ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:05 IST
Last Updated 13 ಫೆಬ್ರುವರಿ 2012, 5:05 IST

ಮರಿಯಮ್ಮನಹಳ್ಳಿ: ಇಂದು ಮಾನವನ ದುರಾಸೆಯಿಂದ ಪರಿಸರ ನಾಶ ಆಗುತ್ತಿದ್ದು, ಪರಿಸರ ಕಾಪಾಡುವ ಹಾಗೂ ಉಳಿಸುವ ನಿಟ್ಟಿನಲ್ಲಿ ಪ್ರತಿ ಯೊಬ್ಬರೂ ಗಿಡ ಮರಗಳನ್ನು ಬೆಳಸಿ, ಪರಿಸರಕ್ಕೆ ನಮ್ಮದೇ ಆದ ಕೊಡುಗೆ ಯನ್ನು ನೀಡಬೇಕೆಂದು ಪಟ್ಟಣದ ಕರ್ನಾಟಕ ಪರಿಸರ ಸಂರಕ್ಷಣಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಬಿ.ಪಾರ್ವತಮ್ಮ ಸಲಹೆ ನೀಡಿದರು.

ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ಸರ್ ಸಿ.ವಿ.ರಾಮನ್ ಇಕೋಕ್ಲಬ್ ಹಾಗೂ ವಿಜ್ಞಾನ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಪರಿಸರ ಜಾಗೃತಿ ಕಾರ್ಯ ಕ್ರಮದಲ್ಲಿ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ವಾತಾವರಣ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪರಿಸರದ ಅವಶ್ಯಕತೆ ಹೆಚ್ಚಿದ್ದು, ಪ್ರತಿಯೊಬ್ಬರು ಹೆಚ್ಚೆಚ್ಚು ಗಿಡಮರಗಳನ್ನು ನೆಡಬೇಕಿದೆ. ಅಲ್ಲದೆ ಇಂದು ಕೈಗಾರೀಕರಣದಿಂದ ಒಂದೆಡೆ ಅನೂಕೂಲವಾದರೆ, ಒಂದೆಡೆ ಅನಾನೂಕೂಲದಿಂದಾಗಿ ಪರಿಸರದ ಮೇಲೆ ಅಪಾರ ಪರಿಣಾಮ ಬೀರುತ್ತಿದೆ. ಅಲ್ಲದೆ ಪರಿಸರ ಸಂರಕ್ಷಣೆಯ ಹೊಣೆ ಪ್ರತಿಯೊಬ್ಬರ ಮೇಲಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಪರಿಸರದ ಬಗ್ಗೆ ಅರಿವು, ಜಾಗತಿ ಮೂಡಿಸಬೇಕಿದೆ.

ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪ ಪ್ರಾಚಾರ್ಯ ಬಿ.ಶಂಕ್ರಪ್ಪ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ನಮ್ಮ ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳ ಬೇಕಿದ್ದು, ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ. ಅಲ್ಲದೆ ಕೈಗಾರಿಕೆಗಳು ಇಂದು ಪ್ರತಿ ಯೊಂದಕ್ಕೂ ಬೇಕಿದೆ. ಆದರೆ ಅದರಿಂದ ಪರಿಸರದ ಮೇಲಾಗುವ ಪರಿಣಾಮ ಗಳನ್ನು ಕಂಡು ಕೊಂಡು ಪರಿಹರಿಸು ವುದರೊಂದಿಗೆ ಪರಿಸರ ಕಾಪಾಡಬೇಕಿದೆ ಎಂದರು.

 ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೈಗಾರೀಕರಣದಿಂದ ಆಗುವ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ 9 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅದರಲ್ಲಿ ರುಖಸಾರ್ ಸೈಯದ್ ಪ್ರಥಮ ಸ್ಥಾನ ಗಳಿಸಿದರೆ, ಅನ್ಸರ್‌ಖಾನ್ ದ್ವಿತೀಯ, ಕೆ. ಕೃಷ್ಣ ತೃತೀಯ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮುಂಚೆ ವಿದ್ಯಾರ್ಥಿಗಳು ಪಟ್ಟಣದ ಮುಖ್ಯ ಬೀದಿಗಳಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿದರು.
ಶಿಕ್ಷಕರಾದ ರೇವಣ್ಣ, ಕೆ.ವಿರೇಶ್, ಸುಜಾತ, ಕುಮಾರಸ್ವಾಮಿ, ಇಬ್ರಾಹಿಂ ಬಡೇ ಖಾನ್, ಅಂಬುಜಾಕ್ಷಿ ಹಾಜ ರಿದ್ದರು. ರವಿಚಂದ್ರ ನಾಯ್ಕ ಸ್ವಾಗತಿಸಿ ದರು. ಸುಭಾಷ್ ವಂದಿಸಿದರು. ಸಿ.ವಿ.ರಶ್ಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.