ADVERTISEMENT

ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಪರಿಸರ ಕಾಪಾಡಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 7:25 IST
Last Updated 5 ಮಾರ್ಚ್ 2012, 7:25 IST

ಕೂಡ್ಲಿಗಿ: ಪರಿಸರವನ್ನು ಕಾಪಾಡಲು ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು ಎಂದು ಬಳ್ಳಾರಿಯ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಸಿ.ಎಂ.ಸತೀಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಅಗಸ್ತ್ಯ ಅಂತರ ರಾಷ್ಟ್ರೀಯ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯ್ತಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಳ್ಳಾರಿ ಗೌತಮ ಬುದ್ಧ ಸ್ಮಾರಕ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಅಭಿಯಾನ ಕುರಿತು ಅವರು ಮಾತನಾಡಿದರು.

ಪ್ಲಾಸ್ಟಿಕ್ ಸಾವ್ಲ್ಲಿಲದ ವಸ್ತುವಾಗಿದ್ದು, ಪರಿಸರದೊಂದಿಗೆ ಇದು ಯಾವುದೇ ಕಾರಣಕ್ಕೂ ವಿಲೀನಗೊಳ್ಳುವುದಿಲ್ಲ. ಇದು ಪರಿಸರಕ್ಕೆ ಮಾರಕ ಎಂದರು.

ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಂಗಡಿಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ತರಬಾರದು. ಕಾಗದ ಅಥವಾ ಬಟ್ಟೆಯ ಚೀಲಗಳನ್ನು ಬಳಸು ವುದರಿಂದ ಅವು ಪರಿಸರಕ್ಕೆ ಪೂರಕ ಆಗಿರುತ್ತದೆ ಎಂದು ಹೇಳಿದರು.
ಪ್ಲಾಸ್ಟಿಕ್ ಎಷ್ಟೊಂದು ಹಾನಿಕಾರಕ ವೆಂದರೆ, ಪ್ರಾಣಿ, ಪಕ್ಷಿಗಳು ಪ್ಲಾಸ್ಟಿಕ್ ತಿಂದು ಸಾಯುವ ಸ್ಥಿತಿ ಒದಗಿದೆ ಎಂದು ಅವರು ವಿಷಾದಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರೇಮ ಚಾರ್ಲ್ಸ್, ಪಟ್ಟಣದಲ್ಲಿ ಕಸಕ್ಕಿಂತ ಹೆಚ್ಚಾಗಿ ದೊರೆಯುತ್ತಿರು ವುದು ಪ್ಲಾಸ್ಟಿಕ್. ಕಾರಣ ವಿದ್ಯಾರ್ಥಿ ಗಳು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಲ್ಲಿ ಮುಂದಾಗಬೇಕು ಎಂದರು.

ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಈಗಾಗಲೇ ಅಂಗಡಿಗಳಿಗೆ ತಿಳಿವಳಿಕೆ ನೀಡಿದ್ದು, ಸಾರ್ವಜನಿಕರೂ ಪ್ಲಾಸ್ಟಿಕ್ ಬಳಸುವುದನ್ನು ತಡೆಯಬೇಕಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿ ಕೊಳ್ಳುತ್ತಿದ್ದೇವೆ ಎಂದು ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಂ. ಮಂಜುನಾಥ್ ಮಾತನಾಡಿದರು. ಶಿಕ್ಷಣ ಸಮನ್ವಯಾಧಿಕಾರಿ ಮೈಲೇಶ ಬೇವೂರ, ಪ್ರಾಚಾರ್ಯ ದಾಸಪ್ಪ, ಉಪ ಪ್ರಾಚಾರ್ಯ ಎಸ್.ವೀರೇಶ್, ಶಿಕ್ಷಣ ಸಂಯೋಜಕ ಎಂ.ಎಂ. ಚನ್ನಯ್ಯ, ಶಿಕ್ಷಕಿ ಯರಾದ ಚೌಡಮ್ಮ, ಲಕ್ಷ್ಮೀದೇವಿ ಮುತಾದವರು ಉಪಸ್ಥಿತರಿದ್ದರು.

ಅಗಸ್ತ್ಯ ಫೌಂಡೇಶನ್‌ನ ಶಿವಾನಂದ ಮ್ಯಾಗೇರಿ ಸ್ವಾಗತಿಸಿದರು. ಪಿ. ಅಮರೇಗೌಡ ವಂದಿಸಿದರು. ಎಚ್. ಮಲ್ಲೇಶ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.