ಹೂವಿನಹಡಗಲಿ: ಮಕ್ಕಳಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸ ಬೇಕು. ಆ ಮೂಲಕ ಅವರಲ್ಲಿ ಸಾಹಿತ್ಯದ ಆಸಕ್ತಿಯನ್ನು ಮುಂದುವರಿಸಲು ಸಾಧ್ಯ ಎಂದು ಬಿಸಿಎಂ ತಾಲ್ಲೂಕು ವಿಸ್ತರಣಾಧಿಕಾರಿ ಎಸ್. ಆರ್. ಕಿತ್ತೂರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮದಲಗಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಹಮ್ಮಿಜಕೊಂಡಿದ್ದ ಕಾರ್ಯಕ್ರಮದಲ್ಲಿ ಚಿಗುರು ಕನಸು ಮಕ್ಕಳ ಹಸ್ತಪ್ರತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಕ್ಕಳ ಕಥೆ, ಕವನ, ಚುಟುಕು, ಗಾದೆಮಾತು ಇಂತಹ ಸಾಹಿತ್ಯ ಪ್ರಾಕಾರಗಳನ್ನು ಮಕ್ಕಳಿಗೆ ಪರಿಚಯಿಸಿ ಅವರೇ ಹಸ್ತಪ್ರತಿ ತಯಾರಿಸುವಂತೆ ಉತ್ಸಾಹ ತುಂಬಿದರೆ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಸಾಹಿತಿಗಳಾಗಿ ಬೆಳೆಯುತ್ತಾರೆ ಎಂದರು.
ಜಿ. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೋಷಕರಾದ ಭಾಗ್ಯಮ್ಮ ಎಲ್. ರಾಮರಾವ್ ನಿಲಯ ಪಾಲಕ ಎಂ.ಪಿ.ಎಂ.ಅಶೋಕ, ಡಿ.ರಾಘವೇಂದ್ರ, ಎಂ.ಮತ್ತೂರ, ಮಾತನಾಡಿದರು.ಪ್ರಾಂಶುಪಾಲ ಬಿ.ಮಲ್ಲಜ್ಜ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕರಾದ ಕೆ. ಚಂದ್ರಶೇಖರ ಟಿ.ಡಿ.ಲೋಕೇಶ್, ಎಸ್. ಮಂಜುನಾಥ, ಬೋರಯ್ಯ ಉಪಸ್ಥಿತರಿದ್ದರು.
ಎಂ.ಟಿ.ಯಮನೂರಸ್ವಾಮಿ ವಾರ್ಷಿಕ ವರದಿ ವಾಚಿಸಿದರು. ಆಶಾ ಪರ್ವೀನ್, ಎಸ್.ಮಂಗಳ, ಶಿವಪ್ರಕಾಶ್ ಮತ್ತು ಮಾರುತಿರಾವ್ ಕಾರ್ಯಕ್ರಮ ನಿರೂಪಿಸಿದರು. ಮಲೈಕಾರ ಸುಲ್ತಾನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.