ADVERTISEMENT

ಸಂಸ್ಕೃತಿಯಿಂದ ದೂರವಾಗುತ್ತಿರುವ ಯೋಗ: ಆತಂಕ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 5:10 IST
Last Updated 16 ಜನವರಿ 2012, 5:10 IST

ಕಂಪ್ಲಿ: ಕಾಯಕ ಮತ್ತು ಯೋಗ ಭಾರತೀಯ ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದು ವಿಷಾದದ ಸಂಗತಿ ಎಂದು ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ಹೇಳಿದರು.

ಆಯುಷ್ ನಿರ್ದೇಶನಾಲಯ, ಜಿ.ಪಂ, ಜಿಲ್ಲಾ ಆಯಷ್ ಇಲಾಖೆ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ `ಯೋಗ ಶಿಕ್ಷಣ ಆರೋಗ್ಯ~ ಕಾರ್ಯಕ್ರಮ ಸಮಾರೋಪದಲ್ಲಿ ಮಾತನಾಡಿ, ಸಂಸ್ಕೃತಿಯನ್ನು ಕಳೆದುಕೊಂಡು ಹುಡುಕುವುದು ಇಂದಿನ ಶೈಲಿಯಾಗಿದೆ ಎಂದರು.

ಹೃದಯ ಪರಿವರ್ತನೆ ಮಾಡುವ ನೈತಿಕತೆ ಶಿಕ್ಷಕರಲ್ಲಿ ಬಂದಾಗ ಮಾತ್ರ ಗಟ್ಟಿತನ ಉಳಿಯುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾದ ವ್ಯಕ್ತಿ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ಸಾಧ್ಯ ಎಂದು ಅವರು ಹೇಳಿದರು.

ಜಿಲ್ಲಾ ಆಯುಷ್ ಅಧಿಕಾರಿ ವೀರನಗೌಡ ಪಾಟೀಲ್ ಮಾತನಾಡಿ, ಔಷಧಿರಹಿತ ಚಿಕಿತ್ಸೆ ಯೋಗದಿಂದ ಮಾತ್ರ ಸಾಧ್ಯ. ಯೋಗ ಶಿಕ್ಷಣ ಪಡೆದ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಮುಂದುವರಿಸುವಂತೆ ಮನವಿ ಮಾಡಿದರು.

ಮಹಾರಾಷ್ಟ್ರ ರಾಚೋಟೇಶ್ವರ ಸ್ವಾಮೀಜಿ, ಸಂಪನ್ಮೂಲ ವ್ಯಕ್ತಿ ಹುಸೇನ್ ಷರೀಫ್, ಶಿಕ್ಷಣ ಇಲಾಖೆ ವಿರೂಪಾಕ್ಷಿ, ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿ, ಡಾ. ಜಗನ್ನಾಥ ಹಿರೇಮಠ ಮಾತನಾಡಿದರು.

ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಿದ್ರಾಮಯ್ಯ ಕುರ್ತಕೋಟಿ, ಸಂಪನ್ಮೂಲ ವ್ಯಕ್ತಿ ವಿದ್ವಾನ್ ಜಯರೇವಣ್ಣ, ಆರ್.ಡಿ. ರವೀಂದ್ರ, ಡಾ. ನಾಗರಾಜ ಹೊಸಮನಿ, ಮಂದಾಕಿನಿ, ಚನ್ನಕೇಶ, ಟಿ. ಕೊಟ್ರೇಶ್, ಸದಾಶಿವಪ್ಪ, ಡಾ. ಗುರುರಾಜ ಉಮಚಗಿ, ಡಾ. ಮರಳಸಿದ್ಧನಗೌಡ, ಡಾ. ಸುಚೇತ ದೇಸಾಯಿ, ಡಾ. ಸರಸ್ವತಿ, ಡಾ. ಆರತಿ ಹಿರೇಮಠ ಹಾಜರಿದ್ದರು.

ಮಹಿಳಾ ಶಿಕ್ಷಣ ಕಾರ್ಯಕ್ರಮ
ಕಂಪ್ಲಿ ಸಮೀಪದ ನಂ.76 ವೆಂಕಟಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಪಿ.ಇ.ಜಿ.ಇ.ಎಲ್ ಯೋಜನೆಯಡಿ ಹೆಣ್ಣು ಮಕ್ಕಳ ಮಾರ್ಗದರ್ಶಿ ಕೇಂದ್ರದಿಂದ ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಶುಕ್ರವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಕೀಲ ಎಂ.ವಿ. ಕೊಟ್ಟೂರು ಕಾನೂನು ಸಲಹೆ ಕುರಿತು ವಿವರಿಸಿದರು. ಮುಖಂಡ ಕಟ್ಟೆ ವಿರೂಪಕ್ಷಪ್ಪ ಮಹಿಳೆಯರ ಶಿಕ್ಷಣ ಹಕ್ಕು ಕುರಿತು ಮಾತನಾಡಿದರು. ಹೆಣ್ಣು ಮಕ್ಕಳ ಮಾರ್ಗದರ್ಶಿ ಕೇಂದ್ರದ ಶಿಕ್ಷಕಿ ವೀಣಾ ಮಾರ್ಗದರ್ಶಿ ಕೇಂದ್ರದ ಉದ್ದೇಶ, ಗುರಿ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.

ಎಸ್‌ಡಿಎಂಸಿ ಸದಸ್ಯ ಜಡೆಯ್ಯ, ಬಡ್ತಿ ಮುಖ್ಯಗುರು ಎಚ್. ಸಿದ್ಧಲಿಂಗಪ್ಪ, ಶಿಕ್ಷಕ ಮಲ್ಲಪ್ಪ, ಹರೀಶ್, ಮಕ್ಕಳ ಪಾಲಕರು, ಪೋಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.