ಹೂವಿನಹಡಗಲಿ: ರೈತರು ಅವಸರದ ಕೃಷಿಗೆ ಬೆನ್ನುಹತ್ತಿ ರಸಗೊಬ್ಬರ ಬಳಸುತ್ತಾ ಸಾವಯವ ಗೊಬ್ಬರವನ್ನು ಮರೆಯುತ್ತಿದ್ದಾರೆ ಎಂದು ಬೆಂಗಳೂರಿನ ಇಪ್ಕೋದ ರಾಜ್ಯ ಮಾರಾಟ ವ್ಯವಸ್ಥಾಪಕರಾದ ಕೆ.ಟಿ. ಮಂಜುನಾಥ ಹೇಳಿದರು.
ತಾಲ್ಲೂಕಿನ ಉತ್ತಂಗಿ ಗ್ರಾಮದ ರೈತ ಬೆಳವಿಗಿ ಶಿವಪ್ಪನವರ ಹೊಲದಲ್ಲಿ ಇಂಡಿಯನ್ ಫಾರ‌್ಮರ್ಸ್ ಕೋ-ಆಪರೇಟಿವ್.ಲಿ., ಹೊಸಪೇಟೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಂಗಿ ಮತ್ತು ಕೃಷಿ ಇಲಾಖೆ ಹಡಗಲಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸೂರ್ಯಕಾಂತಿ ಬೆಳೆಯಲ್ಲಿ ಜೇನುಕೃಷಿ ಸಾಕಾಣಿಕೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಸಂಸ್ಥೆ ಕಾಲ ಕಾಲಕ್ಕೆ ತಕ್ಕಂತೆ ರೈತರು ಬೆಳೆಯುವ ಬೆಳೆಯ ಬೆಳವಣಿಗೆ ಹಾಗೂ ಮಣ್ಣಿನ ಆರೋಗ್ಯ ಪರಿಪಾಲನೆಯ ಪ್ರಾತ್ಯಕ್ಷತೆಯನ್ನು ಹಲವಾರು ಕಡೆ ಹಮ್ಮಿಕೊಂಡಿದೆ. ಮಣ್ಣಿಗೆ ಬೇಕಾದ ಗೊಬ್ಬರದ ಅಂಶ ಮತ್ತು ಫಲವತ್ತತೆಯು ಅತಿಯಾದ ರಸಗೊಬ್ಬರ ಬಳಕೆಯಿಂದ ಕ್ಷೀಣಿಸುತ್ತದೆ ಎಂದರು.
ರೈತರು ಕಬ್ಬು ಬೆಳೆದ ಮೇಲೆ ಅದರ ರವದಿಯನ್ನು ಸುಟ್ಟು ಹಾಕದೇ ಜಮೀನಿನ ಒಂದು ಭಾಗದ ಗುಂಡಿ ಯಲ್ಲಿ ಶೇಖರಿಸಿ ಅದಕ್ಕೆ ಸಗಣಿಗೊಬ್ಬರ ಬೆರೆಸಿ ಉತ್ತಮ ಸಾವಯವ ಗೊಬ್ಬರವನ್ನಾಗಿಸಿ ಉಪಯೋ ಗಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಕ್ಷೇತ್ರೋತ್ಸವವನ್ನು ನವದೆಹಲಿಯ ಇಪ್ಕೊ ಆರ್.ಜಿ.ಬಿ. ಸದಸ್ಯ ಚಂದ್ರಶೇಖರ ಉದ್ಘಾಟಿಸಿದರು.
ಹಿರಿಯೂರಿನ ಜೇನು ಕೃಷಿ ತಜ್ಞ ಎಸ್.ಎಂ. ಶಾಂತವೀರಯ್ಯ ಸೂರ್ಯಕಾಂತಿ ಬೆಳೆಯಲ್ಲಿ ಜೇನು ಕೃಷಿ ಮತ್ತು ಅಧಿಕ ಉತ್ಪಾದನೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಹಡಗಲಿಯ ಕೀಟ ಶಾಸ್ತ್ರಜ್ಞ ಡಾ.ಹನುಮಂತಪ್ಪ ಮಾತನಾಡಿದರು.
ದಕ್ಷಿಣ ವಲಯದ ಮಹಾ ಉಪ ಪ್ರಬಂಧಕರಾದ ರಾಜೇಂದ್ರ ಬಿ. ಹಾಲಪ್ಪನವರ್, ಕೃಷಿ ಸಹಾಯಕ ಅಧಿಕಾರಿ ಮಾಲತೇಶ್, ಬೇಸಾಯ ತಜ್ಞರಾದ ಆನಂದಕಾಂಬ್ಳೆ, ಬಿಡಿಸಿಸಿ ಬ್ಯಾಂಕನ ವ್ಯವಸ್ಥಾಪಕರಾದ ಡಿ.ಕೊಟ್ರೇಶನಾಯ್ಕ, ಸ್ನೇಡ್ಸ್ ಸಂಸ್ಥೆಯ ಅನಿತಮ್ಮ, ಗ್ರಾ.ಪಂ. ಸದಸ್ಯ ಎ.ಎಂ. ಗುರುಬಸವರಾಜ್, ಸೂರ್ಯಕಾಂತಿ ಬೆಳೆಯಲ್ಲಿ ಜೇನು ಕೃಷಿ ಸಾಗಾಣಿಕೆ ಮಾಡಿದ ರೈತ ಬೆಳವಿಗಿ ಶಿವಪ್ಪ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಡಾ. ಜಿ. ಉಮೇಶ್ ಉಪಸ್ಥಿತರಿದ್ದರು.
ಪಿ.ಎ.ಸಿ.ಎಸ್.ನ ಅಧ್ಯಕ್ಷರಾದ ಸಿ.ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಉತ್ತಂಗಿ ಪಿ.ಎ.ಸಿ.ಎಸ್.ನ ಮಾಜಿ ಅಧ್ಯಕ್ಷ ಬಿ.ಆನಂದ ಸ್ವಾಗತಿಸಿದರು. ಅಂಜಿನಪ್ಪ ಮತ್ತು ಇಪ್ಕೊ ಕಂಪೆನಿಯ ಚಂದ್ರಪ್ಪ ನಿರೂಪಿಸಿದರು. ಉತ್ತಂಗಿ ಗ್ರಾಮದ ಗ್ರಾಮಸ್ಥರು, ಸ್ವ ಸಹಾಯ ಸಂಘದ ಮಹಿಳೆಯರು, ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.