ADVERTISEMENT

ಹಂಪಿ ಸ್ಮಾರಕಗಳ ರಕ್ಷಣೆಗೆ ನಿರ್ಲಕ್ಷ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:20 IST
Last Updated 2 ಅಕ್ಟೋಬರ್ 2012, 4:20 IST

ಹೊಸಪೇಟೆ: ಹಂಪಿಯ ಸ್ಮಾರಕಗಳನ್ನು ರಕ್ಷಿಸುವಲ್ಲಿ ಸರ್ಕಾರ ಹಾಗೂ ಪುರಾತತ್ವ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಹಾಗೂ ಸಂರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆ ಗಳು ಸೋಮವಾರ ನಡೆಸಿದ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ವಿದೇಶಿ ಪ್ರವಾಸಿಗನೊಬ್ಬ ಪಾಲ್ಗೊಂಡು ಗಮನ ಸೆಳೆದರು.

ಸೋಮವಾರ ರಾಜ್ಯ ಹೆದ್ದಾರಿಯ ಪುರಾತತ್ವ ಇಲಾಖೆಯ ಕಚೇರಿ ಎದುರು ವಿಶ್ವ ಹಿಂದೂ ಪರಿಷತ್ತು, ಬಜರಂಗದಳ, ಮಿನಿ ಆಟೊ ಡೋರ್ ವಾಹನ ಚಾಲಕರ ಸಂಘ ಹಾಗೂ ಶ್ರೀ ವಿರೂಪಾಕ್ಷೇಶ್ವರ ಗೈಡ್ಸ್ ಸಂಘಟನೆಗಳ ಸಹಯೋಗದಲ್ಲಿ ನಡೆದ ರಸ್ತೆ ತಡೆ ಯಲ್ಲಿ ರಾಜ ವಂಶಸ್ಥ ಶ್ರೀಕೃಷ್ಣ ದೇವರಾಯ, ಮೋಹನ್ ಚಿಕ್ಕಭಟ್ ಜೋಶಿ, ಮಂಜುನಾಥ, ಮಳಗಿ ವಿಶ್ವನಾಥ, ಈರಣ್ಣ, ರಾಚಯ್ಯ ಸೇರಿದಂತೆ ಇತರರು ಸರ್ಕಾರದ ಹಾಗೂ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿದರು.

ಗಾಳಿಗೋಪುರ ಸೇರಿದಂತೆ ಅನೇಕ ಸ್ಮಾರಕಗಳ ಮೇಲೆ ನಿರಂತರ ದಾಳಿ ನಡೆ ಯುತ್ತಿದೆ. ಆದರೆ  ಸರ್ಕಾರ ದುಷ್ಕ ರ್ಮಿಗಳನ್ನು ಬಂಧಿಸುತ್ತ್ಲ್ಲಿಲ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಸರ್ಕಾರ ಹಾಗೂ ಇಲಾಖೆಯ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.