ADVERTISEMENT

257 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 10:25 IST
Last Updated 10 ನವೆಂಬರ್ 2020, 10:25 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬದಲ್ಲಿ ಪದವಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಬಳಿಕ ಪ್ರತಿಜ್ಞೆ ಸ್ವೀಕರಿಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬದಲ್ಲಿ ಪದವಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಬಳಿಕ ಪ್ರತಿಜ್ಞೆ ಸ್ವೀಕರಿಸಿದರು   

ಕಮಲಾಪುರ (ಹೊಸಪೇಟೆ ತಾಲ್ಲೂಕು): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬದಲ್ಲಿ ಮಂಗಳವಾರ ಒಟ್ಟು 257 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು.

ಉಪಮುಖ್ಯಮಂತ್ರಿಯೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ವಿಭಾಗವಾರು ವಿವರ ಇಂತಿದೆ. ಇಬ್ಬರಿಗೆ ಡಿ.ಲಿಟ್. ಪದವಿ, 74 ಪಿಎಚ್.ಡಿ., 32 ಎಂ.ಫಿಲ್. ಪದವಿ, 21 ಎಂ.ಎ. ಪಿಎಚ್.ಡಿ. (ಕನ್ನಡ ಸಾಹಿತ್ಯ) ಸಂಯೋಜಿತ ಪದವಿ, 2 ಎಂ.ಎ.ಪಿಎಚ್.ಡಿ.(ಮಹಿಳಾ ಅಧ್ಯಯನ) ಸಂಯೋಜಿತ ಪದವಿ, 12 ಎಂ.ಎ. ಪಿಎಚ್.ಡಿ. (ಇತಿಹಾಸ ಮತ್ತು ಪುರಾತತ್ವ) ಸಂಯೋಜಿತ ಪದವಿ, 12 ಎಂ.ಎ. ಪಿಎಚ್.ಡಿ. (ಸಮಾಜಶಾಸ್ತ್ರ) ಸಂಯೋಜಿತ ಪದವಿ, 7 ಎಂ.ಎ. ಪಿಎಚ್.ಡಿ. (ಗ್ರಾಮೀಣಾಭಿವೃದ್ಧಿ) ಸಂಯೋಜಿತ ಪದವಿ, 3 ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, 08 ಎಂ.ವಿ.ಎ.(ಚಿತ್ರಕಲೆ), 9 ಎಂ. ಮ್ಯೂಸಿಕ್, 13 ಬಿ. ಮ್ಯೂಸಿಕ್, 33 ನಾಟಕ ಡಿಪ್ಲೊಮಾ, 7 ಪಂಚಾಯತ್‍ರಾಜ್ ಡಿಪ್ಲೊಮಾ, 6 ಕನ್ನಡ ಭಾಷಾ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ, 7 ಭಾಷಾಂತರ ಸ್ನಾತಕೋತ್ತರ ಡಿಪ್ಲೊಮಾ, 6 ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ, ಮೂವರಿಗೆ ಶಾಸನಶಾಸ್ತ್ರ ಸ್ನಾತಕೋತ್ತರ ಡಿಪ್ಲೊಮಾ ಪದವಿ.

ADVERTISEMENT

ರಾಜ್ಯಪಾಲರ ಗೈರು:

ರಾಜ್ಯಪಾಲ ವಜುಭಾಯಿ ವಾಲಾ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಪದವಿ ಪ್ರಮಾಣ ಪತ್ರ ಪಡೆಯಲು ಬಂದ ವಿದ್ಯಾರ್ಥಿಗಳಿಗಷ್ಟೇ ಸಭಾಂಗಣದೊಳಗೆ ಬಿಡಲಾಯಿತು. ಅವರ ಜತೆಗೆ ಬಂದವರು ಸಭಾಂಗಣದ ಹೊರಭಾಗದಲ್ಲಿ ಅಳವಡಿಸಿದ್ದ ಪರದೆ ಮೇಲೆ ಕಾರ್ಯಕ್ರಮ ವೀಕ್ಷಿಸಿ ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.