ಹೊಸಪೇಟೆ (ವಿಜಯನಗರ): ನಟ ಸುದೀಪ್ ಅವರ ಜನ್ಮದಿನದ ಪ್ರಯುಕ್ತ ರೋಟರಿ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸಹಭಾಗಿತ್ವದಲ್ಲಿ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ರಕ್ತದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ‘ರಕ್ತದಾನ ಸಹಾಯ, ತ್ಯಾಗ,ನಿಸ್ವಾರ್ಥಪ್ರೀತಿಯ ಸಂಕೇತವಾಗಿಎಲ್ಲಾ ಸಂಬಂಧಗಳನ್ನು ಮೀರಿದೆ’ ಎಂದರು.
‘ನಾನು ಸಿದ್ದರಾಮೇಶ್ವರನಾಗಿ ರಕ್ತದಾನ ಮಾಡುವುದಕ್ಕಿಂತಲೂಯುವಅಧಿಕಾರಿಯಾಗಿ ರಕ್ತದಾನ ಮಾಡುವುದರಿಂದ ಇತರರಿಗೆ ಪ್ರೇರಣೆಯಾಗಲಿದೆ. ಅವಕಾಶ ಸಿಕ್ಕಾಗಲೆಲ್ಲಾ ರಕ್ತದಾನ ಮಾಡುವೆ, ರಕ್ತದಾನದಿಂದ ದೇಹದ ಆರೋಗ್ಯ ವೃದ್ಧಿಸಲಿದೆ’ ಎಂದು ಹೇಳಿದರು.
ಡಾ.ಸೋಮಶೇಖರ್ ಮಾತನಾಡಿ, ‘ದೇಶದಲ್ಲಿ ಪ್ರತಿ ವರ್ಷ ಐದು ಕೋಟಿ ಯೂನಿಟ್ ರಕ್ತಬೇಕು, ಆದರೆ, ಶೇ 50ರಷ್ಟು ರಕ್ತ ಸಂಗ್ರಹಿಸಲಾಗುತ್ತಿದೆ. ಒಂದು ಯೂನಿಟ್ ರಕ್ತವು ಐದು ಜನರ ಜೀವ ಉಳಿಸುತ್ತದೆ.ಮುಂದುವರೆದ ದೇಶಗಳಲ್ಲಿ ಸ್ವಯಂಪ್ರೇರಿತರಾಗಿಸಮಯಾನುಸಾರ ರಕ್ತದಾನ ಮಾಡುತ್ತಾರೆ. ನಮ್ಮ ದೇಶದಲ್ಲಿ ಶಿಬಿರಗಳನ್ನು ಆಯೋಜಿಸಿದರೆ ರಕ್ತ ನೀಡುತ್ತಾರೆ. ಪ್ರತಿಯೊಬ್ಬರೂಜಾಗೃತರಾಗುವುದರಿಂದ ಮುಂದಿನ ದಿನಗಳಲ್ಲಿ 2.5 ರಿಂದ 3 ಕೋಟಿ ಯೂನಿಟ್ ರಕ್ತ ಸಂಗ್ರಹವಾಗಲಿದೆ’ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಕೋರಿಶೆಟ್ಟಿ, ಕಾರ್ಯದರ್ಶಿ ದೀಪಕ್ ಕೊಳಗದ್, ವೀರಭದ್ರ, ಹರ್ಷಾ, ಸುದೀಪ್ ಅಭಿಮಾನಿಗಳು ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.