
ಹರಪನಹಳ್ಳಿ: ತಾಲ್ಲೂಕಿನ ಮುತ್ತಿಗಿ ಗ್ರಾಮದಲ್ಲಿ ಈಶ್ವರ ಬಸವೇಶ್ವರ ದೇವಸ್ಥಾನ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವ ಬುಧವಾರ ಜರುಗಿತು.
ಗ್ರಾಮ ಪ್ರವೇಶಿಸಿದ ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಕರೆತಂದು ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.
ಬೆಣ್ಣಿಹಳ್ಳಿ ಹಿರೇಮಠದ ಪಂಚಾಕ್ಷರಿ ಸ್ವಾಮೀಜಿ, ಮುತ್ತಿಗಿ ಮರುಳಸಿದ್ದೇಶ್ವರ ಸೇವಾಶ್ರಮದ ಶಿವಯೋಗಿ ಅಜ್ಜಯ್ಯ ಸ್ವಾಮೀಜಿ, ಮುತ್ತಿಗಿ ವಾಗೀಶ್, ಜಂಬಣ್ಣ, ಹನುಮಂತಪ್ಪ, ರಾಮಣ್ಣ, ತುಕ್ಕೇಶಪ್ಪ, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.