ಹರಪನಹಳ್ಳಿ: ತಾಲ್ಲೂಕಿನ ಹಲುವಾಗಲು ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಗುರುವಾರ ಸಡಗರ, ಸಂಭ್ರಮದಿಂದ ನೆರವೇರಿತು.
ದೇವಸ್ಥಾನದಲ್ಲಿ ಬುಧವಾರ ಚಂದ್ರದರ್ಶನ ಮತ್ತು ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಗುರುವಾರ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಲಂಕೃತ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಥದತ್ತ ವಾದ್ಯಸಮೇತ ಮೆರವಣಿಗೆ ಮೂಲಕ ಕರೆತರಲಾಯಿತು.
ಸಿಂಗಾರಗೊಂಡಿದ್ದ ರಥವನ್ನು ಪ್ರದಕ್ಷಿಣೆ ಹಾಕಿ, ಸ್ವಾಮಿ ಬಾವುಟ ಹರಾಜು ಹಾಕಿದ ಬಳಿಕ ಭಕ್ತರು ರಥವನ್ನು ಎಳೆದು ಭಕ್ತಿ ಸಲ್ಲಿಸಿದರು.
ಏ್ರಪಿಲ್ 12ರ ಶುಕ್ರವಾರ ಊರಮ್ಮದೇವಿಯನ್ನು ಮೆರವಣಿಗೆ ಮೂಲಕ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆತರಲಾವುದು. ಸಂಜೆ ವಾಲ್ಮೀಕಿ ಸಮಾಜದಿಂದ ಓಕುಳಿ ಉತ್ಸವ ಜರುಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.