
ಹಗರಿಬೊಮ್ಮನಹಳ್ಳಿ: ‘ಅನ್ನಭಾಗ್ಯ’ ಯೋಜನೆಯ ಪಡಿತರ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದ ₹7.71ಲಕ್ಷ ಮೌಲ್ಯದ 34.3 ಟನ್ ಅಕ್ಕಿ ತುಂಬಿದ್ದ 716 ಚೀಲಗಳನ್ನು ಪಟ್ಟಣದ ಪೊಲೀಸರು ಮೂರು ವಾಹನಗಳ ಸಮೇತ ಪಟ್ಟಣದ ಹೊರ ವಲಯದಲ್ಲಿ ಶನಿವಾರ ವಶಪಡಿಸಿಕೊಂಡಿದ್ದಾರೆ.
ಪಟ್ಟಣದಿಂದ ಒಂದು ಲಾರಿ ಮತ್ತು 2 ಸರಕು ಸಾಗಣೆ ವಾಹನಗಳಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಮೂಟೆಗಳು ಭರ್ತಿಯಾಗಿದ್ದು ಇಲ್ಲಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಣೆ ಮಾಡುವುದಕ್ಕೆ ಅಣಿಯಾಗಿತ್ತಿರುವಾಗಲೇ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆಯ ನಿರೀಕ್ಷಕ ವೀರಣ್ಣ ಅಬ್ಬಿಗೇರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಪಟ್ಟಣದ ಗೋವಿಂದರೆಡ್ಡಿ ಮತ್ತು ಮೂವರು ಚಾಲಕರ ಮೇಲೆ ಪ್ರಕರಣ ದಾಖಲಾಗಿದೆ. ಕಾಳಸಂತೆಗೆ ಸಾಗಿಸುತ್ತಿದ್ದ ಅಕ್ಕಿ ಮೂಟೆಗಳನ್ನು ಎಪಿಎಂಸಿ ಆವರಣದಲ್ಲಿರುವ ಗೋದಾಮುಗಳಲ್ಲಿ ಇರಿಸಲಾಗಿದೆ, ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.