ADVERTISEMENT

ಕಾರ್ಮಿಕ ವಿರೋಧಿ ನೀತಿ: ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:31 IST
Last Updated 8 ಜುಲೈ 2025, 4:31 IST
ಕಂಪ್ಲಿಯಲ್ಲಿ ಸೋಮವಾರ ನಡೆದ ಸಿಐಟಿಯು ತಾಲ್ಲೂಕು ಜಂಟಿ ಸಮಿತಿ ಪದಾಧಿಕಾರಿಗಳ ಸಂಘಟನೆ ಸಭೆಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಮಾತನಾಡಿದರು
ಕಂಪ್ಲಿಯಲ್ಲಿ ಸೋಮವಾರ ನಡೆದ ಸಿಐಟಿಯು ತಾಲ್ಲೂಕು ಜಂಟಿ ಸಮಿತಿ ಪದಾಧಿಕಾರಿಗಳ ಸಂಘಟನೆ ಸಭೆಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಮಾತನಾಡಿದರು   

ಕಂಪ್ಲಿ: ‘ಕಾರ್ಮಿಕ ವಿರೋಧಿ ನೀತಿ ವಿರುದ್ಧ ಜುಲೈ 9ರಂದು ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಪಟ್ಟಣದಲ್ಲಿಯೂ ಪ್ರತಿಭಟನಾ ಮೆರವಣಿಗೆ, ಬಹಿರಂಗಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ತಿಳಿಸಿದರು.

ಇಲ್ಲಿಯ ಅತಿಥಿಗೃಹ ಆವರಣದಲ್ಲಿ ಸೋಮವಾರ ನಡೆದ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಸಿಐಟಿಯು ತಾಲ್ಲೂಕು ಜಂಟಿ ಸಮಿತಿ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಮಾತನಾಡಿ, ತಾಲ್ಲೂಕಿನ ಎಲ್ಲ ರೈತ, ದಲಿತ, ಕಾರ್ಮಿಕ, ಪುನರ್ ವಸತಿ ಕಲ್ಪಿತ ದೇವದಾಸಿ ಮಹಿಳೆಯರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

‘ಕೇಂದ್ರ ಸರ್ಕಾರ ವೇತನ ಸಂಹಿತೆಯಲ್ಲಿ 4, ಕೈಗಾರಿಕಾ ಸಂಹಿತೆಯಡಿ 3, ಔದ್ಯೋಗಿಕ ಸುರಕ್ಷತೆ, ಆರೋಗ್ಯದಡಿ 13, ಸಾಮಾಜಿಕ ಭದ್ರತಾ ಸಂಹಿತೆಯಡಿ 9 ಸೇರಿ ಒಟ್ಟು 29 ಕಾನೂನುಗಳನ್ನು ತಿದ್ದುಪಡಿಗೆ ರೂಪಿಸಲಾಗಿದ್ದು, ಈ ಎಲ್ಲಾ ಕಾನೂನುಗಳು ಅಸಂಘಟಿತ, ಸ್ತ್ರೀ ಮತ್ತು ಅನೌಪಚಾರಿಕ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿವೆ’ ಎಂದು ದೂರಿದರು.

ADVERTISEMENT

ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಂಡಿ ಬಸವರಾಜ, ವಸಂತರಾಜ ಕಹಳೆ, ಐ. ಹೊನ್ನೂರುಸಾಬ್, ನಾಗರಾಜ, ಎ.ಎಸ್. ಯಲ್ಲಪ್ಪ, ಎಚ್. ಮರಿಸ್ವಾಮಿ, ಎಸ್. ಬಸವರಾಜ, ಎಂ. ಅಂಕಲೇಶ, ಟಿ. ಅನುರಾಧ, ಎಸ್. ತಿಪ್ಪಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.