ADVERTISEMENT

ಬಳ್ಳಾರಿ: ರಾತ್ರೋ ರಾತ್ರಿ ಬ್ಯಾನರ್‌ಗಳು ತೆರವು 

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 2:48 IST
Last Updated 4 ಜನವರಿ 2026, 2:48 IST
ವಾಲ್ಮೀಕಿ ಪ್ರತಿಮೆ ಅನಾವರಣದ ಕಾರ್ಯಕ್ರಮಕ್ಕೆಂದು ಬಳ್ಳಾರಿ ನಗರದ ಎಚ್‌.ಆರ್‌ ಗವಿಯಪ್ಪ ವೃತ್ತದಲ್ಲಿ ಭರತ್‌ ರೆಡ್ಡಿ  ಬೆಂಬಲಿಗರು ಅಳವಡಿಸಿದ್ದ ಬ್ಯಾನರ್‌ವೊಂದನ್ನು ಪಾಲಿಕೆ ಸಿಬ್ಬಂದಿ ಶುಕ್ರವಾರ ರಾತ್ರಿ ತೆರವುಗೊಳಿಸಿದರು. 
ವಾಲ್ಮೀಕಿ ಪ್ರತಿಮೆ ಅನಾವರಣದ ಕಾರ್ಯಕ್ರಮಕ್ಕೆಂದು ಬಳ್ಳಾರಿ ನಗರದ ಎಚ್‌.ಆರ್‌ ಗವಿಯಪ್ಪ ವೃತ್ತದಲ್ಲಿ ಭರತ್‌ ರೆಡ್ಡಿ  ಬೆಂಬಲಿಗರು ಅಳವಡಿಸಿದ್ದ ಬ್ಯಾನರ್‌ವೊಂದನ್ನು ಪಾಲಿಕೆ ಸಿಬ್ಬಂದಿ ಶುಕ್ರವಾರ ರಾತ್ರಿ ತೆರವುಗೊಳಿಸಿದರು.    

ಬಳ್ಳಾರಿ: ಬ್ಯಾನರ್‌ ವಿಚಾರಕ್ಕೆ ನಡೆದ ಅವಘಡದ ಜೊ'ದೆಉಏ ನಗರದಲ್ಲಿದ್ದ ಎಲ್ಲ ಅಕ್ರಮ ಬ್ಯಾನರ್‌, ಕಟೌಟ್‌ಗಳನ್ನು ಮಹಾನಗರ ಪಾಲಿಕೆ ಶನಿವಾರ ತೆರವು ಮಾಡಿದೆ.  ನಗರದ ವಾಲ್ಮೀಕಿ ವೃತ್ತದಲ್ಲಿನ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಬಳ್ಳಾರಿ ನಗರದ ಪ್ರತಿ ರಸ್ತೆ, ವೃತ್ತ, ಕಂಬಗಳಿಗೆ ಶಾಸಕ ನಾರಾ ಭರತ್‌ ರೆಡ್ಡಿ ಬೆಂಬಲಿಗರು ನೂರಾರು ಬ್ಯಾನರ್‌ಗಳನ್ನು ಅಳವಡಿಸಿದ್ದರು. ಕೇಸರಿ ಧ್ವಜ ಕಟ್ಟಿದ್ದರು. 

ಬ್ಯಾನರ್‌ಗಳ ತೆರವಿಗೆ ಜಿಲ್ಲಾಧಿಕಾರಿ ಅವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಹಿಂದೆಯೇ, ರಾತ್ರೋರಾತ್ರಿ ತೆರವು ಕಾರ್ಯ ನಡೆದಿದ್ದು, ನಗರ ಸದ್ಯ ಬ್ಯಾನರ್ ಮುಕ್ತವಾಗಿದೆ.

ವಾಲ್ಮೀಕಿ ವೃತ್ತದಲ್ಲಿ ಪ್ರತಿಮೆ ಅನಾವರಣ ಸಂಬಂಧ ಹಾಕಿದ್ದ ವೇದಿಕೆಯನ್ನೂ ತೆರವು ಮಾಡಲಾಗಿದೆ. ಮುಂಜಾಗ್ರತೆಯಾಗಿ ವೃತ್ತದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.