
ಬಳ್ಳಾರಿಯ ಅವ್ವಂಬಾವಿಯಲ್ಲಿ ಜನಾರ್ದನ ರೆಡ್ಡಿ ಅವರ ನಿವಾಸದ ಎದುರು ಪರಿಸ್ಥಿತಿ ಅವಲೋಕಿಸುತ್ತಾ ಡಿಐಜಿ ವರ್ತಿಕಾ ಕಟಿಯಾರ್ ಅವರೊಂದಿಗೆ ನಿಂತಿರುವ ಎಸ್‌ಪಿ ಪವನ್ ನೆಜ್ಜೂರ್
ಬಳ್ಳಾರಿ: ಘರ್ಷಣೆ ಸ್ಥಳದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಅಮಾನತುಗೊಂಡಿರುವ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರ್ ಅವರು ಘಟನಾ ಸ್ಥಳದಲ್ಲಿದ್ದು, ಪರಿಶೀಲಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ.
ಡಿಐಜಿ ವರ್ತಿಕಾ ಕಟಿಯಾರ್ ಅವರ ಜತೆಗೇ ಪರಿಸ್ಥಿತಿ ಅವಲೋಕನ ನಡೆಸುತ್ತಿರುವುದು, ‘ಎಷ್ಟು ಜನ ಸೇರಿದ್ದಾರಪ್ಪ’ ಎಂಬ ವರ್ತಿಕಾ ಅವರ ಪ್ರಶ್ನೆಗೆ ಉತ್ತರಿಸುತ್ತಾ ಅವರೊಂದಿಗೆ ಹೆಜ್ಜೆ ಹಾಕುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಇವೆ.
‘ಫೋನ್‌ನಲ್ಲಿ ಮಾತನಾಡುತ್ತಾ ಅಧಿಕಾರಿಗಳಿಗೆ ಸೂಚಿಸುತ್ತಿರುವುದು, ಹತ್ಯ ನಡೆದ ಸ್ಥಳದಲ್ಲಿ ರಕ್ತದ ಕಲೆಗಳನ್ನು ಪರಿಶೀಲಿಸುತ್ತ ನಿಂತಿರುವ ಚಿತ್ರಗಳು ಅವರು ಸ್ಥಳದಲ್ಲೇ ಇದ್ದರು ಎಂಬುದನ್ನು ಹೇಳುತ್ತಿವೆ. ಮೊದಲ ಘರ್ಷಣೆ ನಡೆದ ಬಳಿಕ ನಗರ ಡಿಎಸ್‌ಪಿ ಅವರಿಂದ ವಿವರಣೆ ಪಡೆಯುತ್ತಿರುವ ವಿಡಿಯೊಗಳೂ ಸದ್ಯ ಸಿಕ್ಕಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.