ADVERTISEMENT

ಬಳ್ಳಾರಿ: 282 ಗ್ರಾಂ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:50 IST
Last Updated 1 ಜನವರಿ 2026, 7:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೂಡ್ಲಿಗಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗೋವಿಂದಗಿರಿ ಗೊಲ್ಲರಹಟ್ಟಿಯ ಮನೆಯೊಂದರ ಮೇಲೆ ಬುಧವಾರ ದಾಳಿ ಮಾಡಿದ ಪೊಲೀಸರು ಮನೆಯಲ್ಲಿದ್ದ ಗಾಂಜಾ ವಶಪಡಿಸಿಕೊಂಡು, ಗಾಂಜಾ ಸಂಗ್ರಹಿಸಿದ್ದ ಚಿತ್ತಪ್ಪ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

‌ಖಚಿತ ಮಾಹಿತಿ ಮೇರೆಗೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ನೇತೃತ್ವದಲ್ಲಿ ದಾಳಿ ಮಾಡಿದ ಕೂಡ್ಲಿಗಿ ಪೊಲೀಸರು ₹ 14,100 ಮೌಲ್ಯದ 282 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ.

ಸಿಪಿಐ ಪ್ರಲ್ಹಾದ್ ಆರ್. ಚನ್ನಗಿರಿ, ಪಿಎಸ್ಐ ಸಿ. ಪ್ರಕಾಶ್, ಹೆಡ್ ಕಾನ್‌ಸ್ಟೆಬಲ್ ರಾಘವೇಂದ್ರ, ಬಸಪ್ಪ ಬದ್ದಿ, ಪೂಜಾರಿ ಮಂಜುನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.