ADVERTISEMENT

ಮೆಕ್ಕೆಜೋಳಕ್ಕೆ ವ್ಯತ್ಯಾಸದ ಬೆಲೆ: ನೋಂದಣಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:54 IST
Last Updated 31 ಜನವರಿ 2026, 7:54 IST
<div class="paragraphs"><p>ಮೆಕ್ಕೆಜೋಳ</p></div>

ಮೆಕ್ಕೆಜೋಳ

   

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳ ಉತ್ಪನ್ನಕ್ಕೆ ಬೆಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ನೋಂದಣಿ ಆರಂಭಿಸಲಾಗಿದೆ. 

ಯೋಜನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಮೂಲಕ ಅನುಪ್ಠಾನಗೊಳಿಸಲಾಗುತ್ತಿದ್ದು, ಮಾರುಕಟ್ಟೆಗಳಲ್ಲಿ ವಹಿವಾಟು ಆಗುವ ಧಾರಣೆ ಪರಿಗಣಿಸಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250 ವ್ಯತ್ಯಾಸದ ಮೊತ್ತ ಪಾವತಿಸಲಾಗುತ್ತಿದೆ. ಈ ಯೋಜನೆಯಡಿ ಪ್ರತಿ ಎಕರೆಗೆ 12 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್‌ಗೆ ಮಿತಿಗೊಳಿಸಲಾಗಿದೆ. 

ADVERTISEMENT

ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ದರವನ್ನು ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹2,150 ನಿಗದಿ ಮಾಡಿದೆ. ಈ ಮೊತ್ತಕ್ಕೆ ಅಥವಾ ಹೆಚ್ಚಿನ ದರದಲ್ಲಿ ಉತ್ಪನ್ನ ಮಾರಾಟವಾಗಿದ್ದರೆ ಬೆಲೆ ವ್ಯತ್ಯಾಸ ಪಾವತಿ ದೊರೆಯುವುದಿಲ್ಲ.

ರೈತರು ಜಿಲ್ಲೆಯಲ್ಲಿಯೇ ನೋಂದಣಿ ಮಾಡಿಸಿಕೊಳ್ಳಬೇಕು, ನೋಂದಣಿ ಮಾಡಿಸಿಕೊಂಡ ರೈತರು ಮೆಕ್ಕೆಜೋಳವನ್ನು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ಯೋಜನೆ ಜಾರಿಯಲ್ಲಿರುವ ಹತ್ತಿರದ ಏಕೀಕೃತ ಮಾರುಕಟ್ಟೆ ವ್ಯವಸ್ಥೆ (ಯುಎಂಪಿ) ಇರುವ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮಾರಾಟ ಮಾಡಿಕೊಳ್ಳಬಹುದು.

ಎಥೆನಾಲ್‌ ಉತ್ಪಾದನೆಗಾಗಿ, ಕುಕ್ಕುಟ ಮತ್ತು ಪಶು ಆಹಾರ ತಯಾರಿಕಾ ಘಟಕಗಳಿಗೆ ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಮೆಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಸದರಿ ಯೋಜನೆ ಅನ್ವಯಿಸುವುದಿಲ್ಲ.

ವ್ಯತ್ಯಾಸದ ಮೊತ್ತವನ್ನು ಡಿಬಿಟಿ ಮುಖಾಂತರ ರೈತರ ಖಾತೆಗೆ ನೇರವಾಗಿ ಪಾವತಿಸಲಾಗುತ್ತದೆ. 

ನೋಂದಣಿ ಕುರಿತ ಮಾಹಿತಿ

ಬಳ್ಳಾರಿ: ಮೊಬೈಲ್‌: 6363153309, 9535380789, ಸಂಡೂರು: 9980676497, ಬಂಡ್ರಿ:9008397644, ಸಿರುಗುಪ್ಪ;7259598625, ಕುರುಗೋಡು 8951307333ಗೆ ಸಂಪರ್ಕಿಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.