
ಜೈಲು (ಪ್ರಾತಿನಿಧಿಕ ಚಿತ್ರ)
ಬಳ್ಳಾರಿ: ಚೆಂಡಿನಲ್ಲಿ ಗಾಂಜಾ ಇರಿಸಿ, ಅದಕ್ಕೆ ಟೇಪ್ ಸುತ್ತಿ ದುಷ್ಕರ್ಮಿಗಳು ಬಳ್ಳಾರಿ ಕೇಂದ್ರ ಕಾರಾಗೃಹದ ಆವರಣಕ್ಕೆ ಎಸೆದಿದ್ದಾರೆ. ಈ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ (ಡಿ. 16) ಜೈಲಿನಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗೆ ಗೋಡೆ ಪಕ್ಕದಲ್ಲಿ ಟೇಪ್ ಸುತ್ತಿದ್ದ ಚೆಂಡು ಬಿದ್ದಿದ್ದು ಕಂಡಿದೆ. ಅದನ್ನು ಜೈಲರ್‌ಗೆ ಒಪ್ಪಿಸಲಾಗಿತ್ತು. ಚೆಂಡು ಸಿಕ್ಕ ಜಾಗದಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿ ಜೈಲಿನ ಆವರಣಕ್ಕೆ ಚೆಂಡು ತೂರುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಆತ ಚೆಂಡು ತೂರಿದ್ದ ಜಾಗ ಪರಿಶೀಲಿಸಿದಾಗ, ಮತ್ತೊಂದು ಚೆಂಡು ಪತ್ತೆಯಾಗಿತ್ತು. ಎರಡೂ ಚೆಂಡುಗಳನ್ನು ತೆರೆದು ನೋಡಿದಾಗ ಅದರಲ್ಲಿ ಗಾಂಜಾ ರೀತಿಯ ವಸ್ತು ಪತ್ತೆಯಾಗಿದೆ ಎಂದು ಗೊತ್ತಾಗಿದೆ.
ಸದ್ಯ ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನ ಒಳಗಿನ ಕೈದಿಗಳನ್ನು ವಿಚಾರಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.