ADVERTISEMENT

ಬಳ್ಳಾರಿ | ಅಕ್ರಮ ಸಾಗಣೆ: 2.84 ಕ್ವಿಂಟಲ್ ಶ್ರೀಗಂಧ ವಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 19:36 IST
Last Updated 18 ಫೆಬ್ರುವರಿ 2026, 19:36 IST
<div class="paragraphs"><p>&nbsp;ಶ್ರೀಗಂಧ ಮರಗಳನ್ನು ಕಡಿದು ಸಿಪ್ಪೆ ಸುಲಿದಿರುವ ದೃಶ್ಯಗಳು</p></div>

 ಶ್ರೀಗಂಧ ಮರಗಳನ್ನು ಕಡಿದು ಸಿಪ್ಪೆ ಸುಲಿದಿರುವ ದೃಶ್ಯಗಳು

   

ಸಂಡೂರು: ತಾಲ್ಲೂಕಿನ ಉತ್ತರ ಮತ್ತು ದಕ್ಷಿಣ ವಲಯಗಳ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಶ್ರೀಗಂಧವನ್ನು ಅಕ್ರಮ ಸಾಗಣೆ, ಮಾರಾಟಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ₹ 15 ಲಕ್ಷ ಮೌಲ್ಯದ 2.89 ಕ್ವಿಂಟಲ್ ತೂಕದ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ. 

ಸುಶೀಲನಗರ ಗ್ರಾಮದ ಲೋಕೇಶ್ ನಾಯ್ಕ್ ಮತ್ತು ಕಿರಣ್ ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಬಂಧಿತರು ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯ ರೋಲ್ಲ ಗ್ರಾಮದಲ್ಲಿರುವ ಖಾಸಗಿ ಸುಗಂಧದ ಕೈಗಾರಿಕೆಗೆ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದರು. ಆಂಧ್ರಪ್ರದೇಶದ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.