ಹೊಸಪೇಟೆ: ಭಾರಿ ವಾಹನಗಳ ಸಂಚಾರ ತಡೆಗೆ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಲೋಹದ ಕಮಾನು ಮಾಡಿದೆ.
ವಿಠಲ ದೇಗುಲ ಮಾರ್ಗದಲ್ಲಿ ಹರೇ ಶಂಕರ ಮಂಟಪ ಬರುತ್ತದೆ. ಬಸ್ ಸೇರಿದಂತೆ ಇತರೆ ದೊಡ್ಡ ವಾಹನಗಳು ಸಂಚರಿಸಿದಾಗ ಮಂಟಪಕ್ಕೆ ಧಕ್ಕೆಯಾಗುತ್ತಿತ್ತು. ಇತ್ತೀಚೆಗೆ ಬಸ್ಸೊಂದು ಮಂಟಪದಲ್ಲಿ ಸಿಲುಕಿಕೊಂಡು ಅದಕ್ಕೆ ಧಕ್ಕೆಯಾಗಿತ್ತು. ಪದೇ ಪದೇ ಈ ರೀತಿಯ ಘಟನೆ ಆಗುತ್ತಿದ್ದು, ಅದನ್ನು ತಡೆಯಲು ಮಂಟಪಕ್ಕೂ ಮೊದಲು ಕಮಾನು ಮಾಡಿಸಿದೆ. ಈಗ ದೊಡ್ಡ ವಾಹನಗಳ ಸಂಚಾರಕ್ಕೆ ತಡೆ ಬಿದ್ದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.