
ಪ್ರಜಾವಾಣಿ ವಾರ್ತೆ
ಸಂಡೂರು: ತಾಲ್ಲೂಕಿನ ಡಿ.ಅಂತಾಪುರ ಗ್ರಾಮದ ಹೊನ್ನುರಪ್ಪ ಅವರ ಮೆಕ್ಕೆಜೋಳ ಜಮೀನಿಗೆ ಶನಿವಾರ ರಾತ್ರಿ ಕರಡಿ ದಾಳಿ ನಡೆಸಿ, ಬೆಳೆದು ನಿಂತ ಫಸಲನ್ನು ನಾಶಪಡಿಸಿದೆ.
‘ಕರಡಿಯು ನಮ್ಮ ಜಮೀನಿಗೆ ನುಗ್ಗಿ ಮೆಕ್ಕೆಜೋಳ ಬೆಳೆ ಹಾನಿ ಮಾಡಿದ್ದರಿಂದ ಆರ್ಥಿಕ ನಷ್ಟವಾಗಿದೆ. ಅರಣ್ಯ ಇಲಾಖೆಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನಷ್ಟ ಪರಿಹಾರ ನೀಡಬೇಕು. ಕರಡಿಗಳು ಜಮೀನುಗಳಿಗೆ ನುಗ್ಗದಂತೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ರೈತ ಹೊನ್ನುರಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.