ADVERTISEMENT

ಸಂಡೂರು | ಕರಡಿ ದಾಳಿ: ಮೆಕ್ಕೆಜೋಳ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:58 IST
Last Updated 18 ಡಿಸೆಂಬರ್ 2025, 2:58 IST
ಸಂಡೂರು ತಾಲ್ಲೂಕಿನ ಡಿ.ಅಂತಾಪುರ ಗ್ರಾಮದ ರೈತ ಹೊನ್ನುರಪ್ಪ ಅವರ ಜಮೀನಿಗೆ ಕರಡಿಗಳು ನುಗ್ಗಿ ಮೆಕ್ಕೆಜೋಳ ಬೆಳೆ ನಾಶಪಡಿಸಿವೆ
ಸಂಡೂರು ತಾಲ್ಲೂಕಿನ ಡಿ.ಅಂತಾಪುರ ಗ್ರಾಮದ ರೈತ ಹೊನ್ನುರಪ್ಪ ಅವರ ಜಮೀನಿಗೆ ಕರಡಿಗಳು ನುಗ್ಗಿ ಮೆಕ್ಕೆಜೋಳ ಬೆಳೆ ನಾಶಪಡಿಸಿವೆ   

ಸಂಡೂರು: ತಾಲ್ಲೂಕಿನ ಡಿ.ಅಂತಾಪುರ ಗ್ರಾಮದ ಹೊನ್ನುರಪ್ಪ ಅವರ ಮೆಕ್ಕೆಜೋಳ ಜಮೀನಿಗೆ ಮಂಗಳವಾರ ತಡರಾತ್ರಿ ಕರಡಿಗಳು ದಾಳಿ ನಡೆಸಿ, ಬೆಳೆದು ನಿಂತ ಫಸಲನ್ನು ನಾಶಪಡಿಸಿವೆ.

‘ಕರಡಿಗಳ ನಿರಂತರ ದಾಳಿಯಿಂದ ನಮ್ಮ ಜಮೀನಿನಲ್ಲಿನ ಮೆಕ್ಕೆಜೋಳ ಬೆಳೆಯು ನಾಶವಾಗಿದ್ದು, ಹೆಚ್ಚಿನ ಆರ್ಥಿಕ ನಷ್ಠಉಂಟಾಗಿದೆ. ಕರಡಿಗಳು ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ನಮ್ಮ ಜಮೀನಿಗೆ ದಾಳಿ ನಡೆಸಿ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸಿವೆ. ಅರಣ್ಯ ಇಲಾಖೆಯವರು ಘಟನಾ ಸ್ಥಳಕ್ಕೆ ಆಗಮಿಸಿ, ಬೆಳೆ ಪರಿಶೀಲಿಸಿ ಅಗತ್ಯ ನಷ್ಟ ಪರಿಹಾರ ನೀಡಬೇಕು. ಕರಡಿಗಳು ಜಮೀನುಗಳಿಗೆ ನುಗ್ಗದಂತೆ ಅರಣ್ಯ ಇಲಾಖೆಯವರು ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ಎಂದು ರೈತ ಹೊನ್ನುರಪ್ಪ ಒತ್ತಾಯಿಸಿದರು.