ಬಳ್ಳಾರಿ: ಬೈಕ್‌ನಲ್ಲಿ ಚಲಿಸುತ್ತಿರುವಾಗಲೇ, ಹಿಂಬದಿಯಲ್ಲಿ ಕುಳಿತು ಬಿಯರ್ ಕುಡಿದು ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ್ದ ಇಬ್ಬರು ಯುವಕರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ನಗರದ ಸಂಚಾರ ಪೊಲೀಸರು ಶುಕ್ರವಾರ ಬೈಕ್ ಜಪ್ತಿ ಮಾಡಿದ್ದಾರೆ.
ನಗರದ ರೈಲ್ವೆ ಫಸ್ಟ್ ಗೇಟ್ ಬಳಿಯ ರಸ್ತೆಯಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ಸಾಗುತ್ತಿರುವುದು, ಹಿಂಬದಿ ಕುಳಿತಿದ್ದವ ಬಾಟಲಿಯಲ್ಲಿ ಬೀರ್ ಕುಡಿಯುತ್ತಿರುವುದು ವಿಡಿಯೊದಲ್ಲಿ ಇತ್ತು.
ವಿಡಿಯೊ ಗಮನಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಅನುಚಿತ ವರ್ತನೆ ತೋರಿದ ಯುವಕರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಬೈಕ್ ಜಪ್ತಿ ಮಾಡಿದ್ದಾರೆ.
ಕರ್ಚೇಡು ಗ್ರಾಮದ ಕೇಶವ (23) ಎಂಬ ಯುವಕ ಮತ್ತು ಆತ ಗೆಳೆಯ ಕಳೆದ ಡಿಸೆಂಬರ್‌ನಲ್ಲಿ ಈ ರೀತಿಯ ವರ್ತನೆ ಪ್ರದರ್ಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.