ADVERTISEMENT

ಬಿಜೆಪಿ ದೂರು ಆಧರಿಸಿ ಭರತ್ ರೆಡ್ಡಿ ವಿರುದ್ಧ ಎಫ್ಐಆರ್

ಜನಾರ್ದನರೆಡ್ಡಿ ಮನೆಗೇ ಬಂದು ದೂರು ಪಡೆದ ಎಎಸ್‌ಪಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 20:51 IST
Last Updated 2 ಜನವರಿ 2026, 20:51 IST
<div class="paragraphs"><p>ಶಾಸಕ ನಾರಾ ಭರತ್ ರೆಡ್ಡಿ</p></div>

ಶಾಸಕ ನಾರಾ ಭರತ್ ರೆಡ್ಡಿ

   

ಬಳ್ಳಾರಿ: ನಗರದಲ್ಲಿ ನಡೆದ ಘರ್ಷಣೆ ಸಂಬಂಧ ಶಾಸಕ ನಾರಾ ಭರತರೆಡ್ಡಿ, ಬೆಂಬಲಿಗರ ವಿರುದ್ಧ ಬ್ರೂಸ್ ಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ.

ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನರೆಡ್ಡಿ ಮನೆಗೆ ಅತಿಕ್ರಮ ಪ್ರವೇಶ, ಜಾತಿನಿಂದನೆ, ಹಲ್ಲೆಗೆ ಯತ್ನ ಆರೋಪದಡಿ ಶಾಸಕ ಭರತರೆಡ್ಡಿ, ತಂದೆ ಸೂರ್ಯನಾರಾಣ ರೆಡ್ಡಿ, ಚಿಕ್ಕಪ್ಪ ಪ್ರತಾಪ್ ರೆಡ್ಡಿ, ಆಪ್ತರಾದ ಸತೀಶರೆಡ್ಡಿ, ಚಾನಾಳ ಶೇಖರ್, ಲೋಕೇಶ ಅವಂಬಾವಿ, ಗಂಗಾಧರ ಮತ್ತಿತರ ಮೇಲೆ ಕೇಸು ಹಾಕಲಾಗಿದೆ.‌

ADVERTISEMENT

ಒಂದು ಪ್ರಕರಣದಲ್ಲಿ 41 ಜನರ ವಿರುದ್ಧ, ಮತ್ತೊಂದು ಪ್ರಕರಣದಲ್ಲಿ 23 ಮಂದಿ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

ರೆಡ್ಡಿ ಮನೆಗೇ ಬಂದು ದೂರು ಪಡೆದ ಎಎಸ್‌ಪಿ: ರಾಜ್ಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ನೀಡಿದ್ದ ವೇಳೆ ಹೆಚ್ಚುವರಿ ಎಸ್‌ಪಿ ರವಿಕುಮಾರ್‌ ಅವರು ಜನಾರ್ದನರೆಡ್ಡಿ ಮನೆಗೇ ಬಂದು ದೂರು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.