ಬಳ್ಳಾರಿ: ‘ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರರ ಮಾಡುವ, ಕ್ರೈಸ್ತ ಮಿಷನರಿಗಳ ಮತಾಂತರ ಪ್ರಕ್ರಿಯೆಗೆ ಬೆಂಬಲ ನೀಡುವ ಭಾಗವಾಗಿ ಸರ್ಕಾರ ಜಾತಿ ಗಣತಿ ಮಾಡುತ್ತಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಜಾತಿಗಳ ಮುಂದಿರುವ ಕ್ರೈಸ್ತ ಎಂಬ ಹೆಸರಿನ ಪಟ್ಟಿಯನ್ನು ಕೈಬಿಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೂ, ಪ್ರತ್ಯೇಕ ಕಾಲಂ ನೀಡುತ್ತಿದೆ. ಸಮೀಕ್ಷೆಗೆ ಹೋದವರು ಜನರನ್ನು ಪ್ರೇರೇಪಿಸಿ ಮತಾಂತರ ಮಾಡುವ ಸಾಧ್ಯತೆಗಳು ಇವೆ’ ಎಂದು ದೂರಿದರು.
‘ಬ್ರಾಹ್ಮಣ ಮುಸ್ಲಿಂ, ಜೈನ ಮುಸ್ಲಿಂ ಎಂಬ ಹೆಸರುಗಳಿಗೆ ದಿನೇಶ್ ಗುಂಡೂರಾವ್ ಅವರೇ ವಿರೋಧಿಸಿದ್ದಾರೆ. ಒಕ್ಕಲಿಗ ಸಮುದಾಯದವರು ಸಮೀಕ್ಷೆ ಮುಂದೂಡಬೇಕು ಎಂದು ಹೇಳಿದ್ದಾರೆ. ಸಮೀಕ್ಷೆ ಕೈಬಿಡಬೇಕು ಎಂದು ಬಿಜೆಪಿಯೂ ಆಗ್ರಹಿಸುತ್ತದೆ’ ಎಂದರು.
ನಷ್ಟ ವಸೂಲಿ ಜೋಕ್: ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯಕ್ಕೆ ಆಗಿರುವ ಸಾವಿರಾರು ಕೋಟಿಗಳ ನಷ್ಟ ವಸೂಲಿಗಾಗಿ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಜೋಕ್ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.