ಹೂವಿನಹಡಗಲಿ: ಪಟ್ಟಣದ ಗವಿಸಿದ್ದೇಶ್ವರ ಮಠದ ಬಳಿ ಸೋಮವಾರ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಚೌಡೇಶ್ವರಿ ದೇವಿ ದಸರಾ ಉತ್ಸವಕ್ಕೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಶಿಲ್ಪಿ ಬಾವಿಹಳ್ಳಿ ಮೌನೇಶ ಆಚಾರ್ ಅವರ ಮನೆಯಲ್ಲಿ ಚೌಡೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಅಲಂಕೃತ ಟ್ರ್ಯಾಕ್ಟರ್ ನಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಭಕ್ತಿಭಾವದಿಂದ ಭಾಗವಹಿಸಿದ್ದರು. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಗವಿಮಠದ ಬಳಿ ಮಂಟಪದಲ್ಲಿ ಚೌಡೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ನವರಾತ್ರಿಯಲ್ಲಿ ಶಕ್ತಿದೇವತೆಯನ್ನು ಭಕ್ತಿಭಾವದಿಂದ ಪೂಜಿಸಿ ಆರಾಧಿಸುವುದರಿಂದ ಒಳಿತಾಗಲಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಣಾಧಿಕಾರಿ ಎಚ್.ಎಂ.ಬೆಟ್ಟಯ್ಯ, ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಕೆ.ಎಂ.ಬಸಲಿಂಗಸ್ವಾಮಿ, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಹಕ್ಕಂಡಿ ಶಿವನಾಗಪ್ಪ, ರಾಚನಗೌಡ, ಎಚ್.ಎಂ.ಪಟದಯ್ಯ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಎಸ್.ಎಂ. ಅಶೋಕ ಶೆಟ್ಟಿ, ಚೌಡೇಶ್ವರಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ಅಲಂಕಾರಪ್ರಿಯ ವೀರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.