ADVERTISEMENT

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಡಿತರ ವಿತರಣೆಗೆ ಮುಗಿ ಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 13:29 IST
Last Updated 6 ಏಪ್ರಿಲ್ 2020, 13:29 IST
   

ಕಾನಹೊಸಹಳ್ಳಿ: ಇಲ್ಲಿನ ಉಜ್ಜಿನಿ ರಸ್ತೆಯ ನ್ಯಾಯಬೆಲೆ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಪಡಿತರ ಅಕ್ಕಿಗಾಗಿ ಜನತೆ ಗುಂಪು ಗುಂಪಾಗಿ ಪಡಿತರ ಪಡೆಯುವ ದೃಷ್ಯ ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾನ್ಯವಾಗಿದೆ.

ಕೊರೊನಾ ಸೊಂಕು ಹಿನ್ನೆಲೆಯಲ್ಲಿ ಲಾಕ್ ಡೌನ ನಡುವೆ ಪಡಿತರ ವಿತರಣೆ ನಡೆಯುತ್ತಿದ್ದು, ಇಲ್ಲಿನ ಉಜ್ಜಿನಿ ರಸ್ತೆಯ ನ್ಯಾಯಬೆಲೆ ಅಂಗಡಿಯ ಮುಂದೆ ಜಮಾಯಿಸಿರುವ ಜನತೆ ತಮಗೂ ಲಾಕ್ ಡೌನ್ ಗೂ ಸಂಭಂದವಿಲ್ಲದ್ದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಡಿತರ ದಾನ್ಯಗಳಿಗಾಗಿ ಮುಗಿಬಿದ್ದಿದ್ದಾರೆ.

ಮಾರಾಕ ರೋಗ ಕೊರೊನಾಗೆ ಇಡೀ ಪ್ರಪಂಚವೇ ನಲುಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನತೆ ಸರಕಾರದ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಿದ್ದಾರೆ.
ಇತ್ತ ಸಮೀಪದ ಚಿಕ್ಕ ಜೊಗಿಹಳ್ಳಿಯಲಿಯು ಸಹ ಸಾಮಜಿಕ‌ ಅಂತರ ಕಾಯ್ದು ಕೊಳ್ಳದ ಜನತೆ ಉದಾಸೀನತೆ ತೊರಿದ್ದಾರೆ.

ADVERTISEMENT

ನ್ಯಾಯಬೆಲೆ ಅಂಗಡಿಯವರೂ ಸಹ ಅಂತರ ಕಾಯ್ದು ಕೊಂಡವರಿಗೆ ಮಾತ್ರ ಪಡಿತರ ವಿತರಿಸದೆ ನಿಯಮ ಉಲ್ಲಂಘನೆ ಮಾಡುತ್ತಿದ್ದು, ಸಂಭಂದಿಸಿದ ಅಧಿಕಾರಿಗಳು ಇತ್ತ ಗಮನ ಹರಿಸದೆ ಇರುವುದು ಸಾರ್ವಜನಿಕರಲ್ಲಿ ಬೆಸರ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.