
ಹರಪನಹಳ್ಳಿ: ‘ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಇತರೆ ಯಾವುದೇ ಅಹಿತಕರ ಘಟನೆಗಳು ನಡೆದಾಗ ತಕ್ಷಣ 112 ನಂಬರಿಗೆ ಕರೆ ಮಾಡಿ’ ಎಂದು ಪಿಎಸ್ಐ ವಿಜಯಕೃಷ್ಣ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಹೋಬಳಿ ತೌಡೂರು ಗ್ರಾಮದ ಎ.ಎಂ.ಕೆ.ವಿ.ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
112ಗೆ ಮಾಹಿತಿ ಕೊಟ್ಟವರ ಹೆಸರು ಬಹಿರಂಗ ಪಡಿಸುವುದಿಲ್ಲ. ವಿದ್ಯಾರ್ಥಿಗಳು ಸೈಬರ್ ಅಪರಾಧ, ಬಾಲ್ಯ ವಿವಾಹ, ರಸ್ತೆ ಅಪಘಾತ, ಪೋಕ್ಸೊ ಕಾಯ್ದೆಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಇದನ್ನು ತಮ್ಮ ಪೋಷಕರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಜಿ.ಮನೋಹರ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು, ಪುಸ್ತಕ ಪ್ರೀತಿಸುವುದನ್ನು ಕಲಿಯಿರಿ ಎಂದರು.
ಮುಖ್ಯಶಿಕ್ಷಕಿ ಸೈಯದ್ ಮುಬಿನಾ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ ಎಂದು ಹೇಳಿದರು.
ಪ್ರಾಚಾರ್ಯ ಪಿ.ದುರ್ಗೇಶ್ ಮಾತನಾಡಿ, ‘ತಪ್ಪು ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಿ. ಮೊಬೈಲ್ ದುರ್ಬಳಕೆ ಮಾಡಿಕೊಳ್ಳದಿರಿ’ ಎಂದರು.
ಶಿಕ್ಷಕರಾದ ಬಸವರಾಜ್, ಬಾಬು ರಾಜೇಂದ್ರ, ಶ್ರೀಕಾಂತ್, ಸಿದ್ದೇಶ್, ಕೂಳಹಳ್ಳಿ ಕೊಟ್ರೇಶ್, ಉಪನ್ಯಾಸಕರಾದ ಚಂದ್ರಪ್ಪ, ನಾಗರಾಜ್, ವಿನಾಯಕ್, ಪ್ರಭಾಕರ್ , ಈಶಪ್ಪ, ಎ.ಎಚ್.ವಸಂತ್, ಹರೀಶ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪರುಶುರಾಮ್, ಈಡಿಗರ ಅಜ್ಜಯ್ಯ ಹಾಗೂ ಶಾಲಾ ವಿದ್ಯಾರ್ಥಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.