ಬಳ್ಳಾರಿ: ಪ್ರಸ್ತಕ ಸಾಲಿನಲ್ಲಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ಅಳವಡಿಕೆಯ ಬಗ್ಗೆ ರಾಜ್ಯ ಸರ್ಕಾರ ರೈತರಿಗೆ ಸ್ಪಷ್ಟತೆ ನೀಡಬೇಕು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಆರ್.ಪುರುಷೋತ್ತಮಗೌಡ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ಆದರೆ, ಕ್ರಸ್ಟ್ ಗೇಟ್‌ಗಳನ್ನು ಅಳವಡಿಸವುದರ ಬಗ್ಗೆ ಸರ್ಕಾರ ಈ ವರೆಗೆ ಗಮನಹರಿಸಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
‘ಕ್ರಸ್ಟ್ ಗೇಟ್‌ಗಳು ನಾಲ್ಕೈದು ದಶಕಗಳಷ್ಟು ಹಳೆಯದಾಗಿವೆ. ಜಲಾಶಯ ಭರ್ತಿಯಾದರೆ ಮತ್ತೊಮ್ಮೆ ಹಾನಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ, ಈ ಬಾರಿ ರೈತರಿಗೆ ಎರಡು ಬೆಳೆ ಬೆಳೆಯಲು ನೀರು ಹರಿಸುವುದರ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.
‘ಕೆಲ ದಿನಗಳಲ್ಲಿಯೇ ರೈತರು ಹಾಗೂ ತುಂಗಭದ್ರಾ ಮಂಡಳಿಯೊಂದಿಗೆ ಸಭೆ ಕರೆದು ಚರ್ಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಖಾಜಾವಲಿ, ಶರಣಗೌಡ, ದೊಡ್ಡಮಲ್ಲಪ್ಪ, ಭೀಮನಗೌಡ, ಗೋವಿಂದಪ್ಪ, ಸಿದ್ದಯ್ಯಸ್ವಾಮಿ, ಜಾಲಿಹಾಳ್ ಶ್ರೀಧರಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.