ಬಳ್ಳಾರಿ: ರೇಣುಕಸ್ವಾಮಿ ಕೊಲೆ ಬಳಿಕ ಮೃತದೇಹದ ವಿಲೇವಾರಿಗೆ ಆರೋಪಿ, ನಟ ದರ್ಶನ್ ಬಾರಿ ಪ್ರಮಾಣದ ಹಣದ ಖರ್ಚು ಮಾಡಿರುವುದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ (ಐಟಿ) ಐವರು ಅಧಿಕಾರಿಗಳು ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಮಧ್ಯಾಹ್ನ 12 ರಿಂದ ಸಂಜೆ 7.30ರವರೆಗೆ ವಿಚಾರಣೆ ನಡೆಯಿತು. ಶುಕ್ರವಾರವೂ ವಿಚಾರಣೆ ಮುಂದುವರೆಯಲಿದೆ.
‘ದರ್ಶನ್ ಪರ ಇಬ್ಬರು ಲೆಕ್ಕ ಪರಿಶೋಧಕರು ಹಾಜರಿದ್ದರೂ, ಅವರನ್ನು ಕೊಠಡಿಯಿಂದ ಹೊರಗೆ ಇರಿಸಲಾಗಿತ್ತು. ದರ್ಶನ್‌ಗೆ ಅಗತ್ಯವೆನಿಸಿದಾಗ ಮಾತ್ರ ಇಬ್ಬರೂ ಲೆಕ್ಕ ಪರಿಶೋಧಕರು ಐಟಿ ಅಧಿಕಾರಿಗಳಿಗೆ ದಾಖಲೆ ಒದಗಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ
ದರ್ಶನ್ ನಟಿಸುತ್ತಿರುವ ‘ಡೆವಿಲ್’ ಚಿತ್ರದ ನಿರ್ಮಾಪಕ ಜೆ.ಬಿ.ಪ್ರಕಾಶ್ ಮತ್ತು ಸುನೀಲ್ ಕುಮಾರ್, ಶ್ರೀನಿವಾಸ ಎಂಬುವರು ವಿಚಾರಣೆ ಮಧ್ಯೆಯೇ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು. ಅವರನ್ನು ಭೇಟಿಯಾಗಲು ಐಟಿ ಅಧಿಕಾರಿಗಳು ದರ್ಶನ್‌ಗೆ ಅವಕಾಶ ಕಲ್ಪಿಸಿಕೊಟ್ಟರು. 25 ನಿಮಿಷ ಮಾತನಾಡಿದ ಬಳಿಕ ಅವರು ನಿರ್ಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.