ADVERTISEMENT

ಬಳ್ಳಾರಿ: ದರ್ಶನ್ ಭೇಟಿಯಾದ ತಾಯಿ, ಅಕ್ಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 16:05 IST
Last Updated 19 ಸೆಪ್ಟೆಂಬರ್ 2024, 16:05 IST
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಮಗ ದರ್ಶನ್‌ರನ್ನು ಭೇಟಿಯಾಗಿ ಹೊರ ಬರುತ್ತಿರುವ ತಾಯಿ ಮೀನಾ ಅವರೊಂದಿಗೆ ಅಕ್ಕ ದಿವ್ಯಾ ಮತ್ತು ಕುಟುಂಬಸ್ಥರು. 
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಮಗ ದರ್ಶನ್‌ರನ್ನು ಭೇಟಿಯಾಗಿ ಹೊರ ಬರುತ್ತಿರುವ ತಾಯಿ ಮೀನಾ ಅವರೊಂದಿಗೆ ಅಕ್ಕ ದಿವ್ಯಾ ಮತ್ತು ಕುಟುಂಬಸ್ಥರು.    

ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಅವರನ್ನು ತಾಯಿ ಮತ್ತು ಅಕ್ಕನ ಕುಟುಂಬಸ್ಥರು ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಭೇಟಿಯಾದರು. 

ಕಾರಾಗೃಹದ ಸಂದರ್ಶಕರ ಕೊಠಡಿಯಲ್ಲಿ ತಾಯಿ ಮೀನಾ, ಅಕ್ಕ ದಿವ್ಯಾ, ಭಾವ ಮಂಜುನಾಥ್‌ ಮತ್ತು ಅವರ ಮಕ್ಕಳಾದ ರವಿಚಂದ್ರ, ಇಂದ್ರಕುಮಾರ್ ಅವರನ್ನು ದರ್ಶನ್ ಭೇಟಿಯಾದರು. ಕೆಲ ಹೊತ್ತು ಮಾತುಕತೆ ನಡೆಸಿದ ಕುಟುಂಬಸ್ಥರು, ಹಣ್ಣುಹಂಪಲು ಮತ್ತು ಬೇಕರಿ ಪದಾರ್ಥಗಳನ್ನು ನೀಡಿದರು.

ದರ್ಶನ್‌ ತಮಗೆ ಹಾಸಿಗೆ, ದಿಂಬು, ಕುರ್ಚಿ ಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ, ನಿಯಮಗಳನ್ನು ಉಲ್ಲಂಘಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.