ಹೊಸಪೇಟೆ: ನಗರದ ದೀಪಾಯನ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ.
ಬಿ. ಪ್ರಿಯಾ ಒಟ್ಟು 625 ಅಂಕಗಳ ಪೈಕಿ 620(ಶೇ 99.2) ಅಂಕ ಪಡೆದರೆ, ರಿತಿಕಾ ಆರ್. ಕುಡಲೆ 614 (98.24) ಅಂಕ ಗಳಿಸಿದ್ದಾರೆ.
30 ವಿದ್ಯಾರ್ಥಿಗಳು ಅಗ್ರ ಶ್ರೇಣಿ, 30 ಪ್ರಥಮ ದರ್ಜೆ, 13 ದ್ವಿತೀಯ ದರ್ಜೆ, ಏಳು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕೆ.ಎಸ್.ಪಿ.ಎಲ್. ಶಾಲೆ ಸಾಧನೆ:
ಶಾಲೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು 86 ವಿದ್ಯಾರ್ಥಿಗಳ ಪೈಕಿ 34 ಅಗ್ರ ಶ್ರೇಣಿ, 15 ಪ್ರಥಮ ದರ್ಜೆ, ಐವರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಸಮೀಕ್ಷಾ ಜೋಷಿ ಮತ್ತು ಹಾಜಿರಾ ತಬಸ್ಸುಮ್ ಶೇ 93ರಷ್ಟು ಅಂಕ ಗಳಿಸಿ ಇಡೀ ಶಾಲೆಗೆ ಪ್ರಥಮ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.