ತೆಕ್ಕಲಕೋಟೆ: ಪಟ್ಟಣದ ಕೋಟೆ ಮುಂಭಾಗದಲ್ಲಿ ಇರುವ ಸಾರ್ವಜನಿಕ ಉದ್ಯಾನ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಂಥಾಲಯ ಬಳಕೆದಾರರ ಸಮಿತಿ ವತಿಯಿಂದ
ಮನವಿ ಸಲ್ಲಿಸಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಉಪ್ಪಾರ ಅಶೋಕ, ‘ಉದ್ಯಾನವನದಲ್ಲಿ ಗಿಡಗಂಟೆಗಳು ಬೆಳೆದು ಹಾವು ಚೇಳುಗಳ ಆವಾಸವಾಗಿದ್ದು, ಇದೇ ಮಾರ್ಗವಾಗಿ ಸಾರ್ವಜನಿಕ ಗ್ರಂಥಾಲಯಕ್ಕೆ ತೆರಳುವುದು ಕಷ್ಟಕರವಾಗಿದೆ. ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ನಿತ್ಯವೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಗ್ರಂಥಾಲಯಕ್ಕೆ ತೆರಳುವುದರಿಂದ ಉದ್ಯಾನವನ ಅಭಿವೃದ್ಧಿ ಪಡಿಸಬೇಕು’ ಎಂದು ಯುವಕ ಪಾಮಣ್ಣ ಒತ್ತಾಯಿಸಿದರು.
ಕಾಡಸಿದ್ದ, ಕನಕ, ಸೋಮೇಶ, ಹನುಮಂತ, ಕಾಳಿಂಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.