ಕಂಪ್ಲಿ: ಗೊಲ್ಲ(ಯಾದವ) ಸಮುದಾಯವನ್ನು ಸರ್ಕಾರ ಪರಿಶಿಷ್ಟ ಪಂಗಡಕ್ಕೆ(ಎಸ್.ಟಿ) ಸೇರ್ಪಡೆ ಮಾಡುವಂತೆ ತಾಲ್ಲೂಕು ಗೊಲ್ಲರ (ಯಾದವ) ಸಂಘದ ತಾಲ್ಲೂಕು ಅಧ್ಯಕ್ಷ ಎಂ. ವೆಂಕಟೇಶ್ವರ ರಾವ್ ಮನವಿ ಮಾಡಿದರು.
ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀಕೃಷ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣನ ಜೀವನ ಕುರಿತು ತಿಳಿಸುವ ಅಂಶಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸುವಂತೆ ಒತ್ತಾಯಿಸಿದರು.
ತಾಲ್ಲೂಕಿನ ಪ್ರಭು ಕ್ಯಾಂಪ್ ಬಳಿಯ ಮುದ್ದಾಪುರ ರಸ್ತೆಯಲ್ಲಿ ಶ್ರೀಕೃಷ್ಣ ವೃತ್ತ ನಿರ್ಮಿಸುವಂತೆ ಆಗ್ರಹಿಸಿದರು.
ತಹಶೀಲ್ದಾರ್ ಜೂಗಲ ಮಂಜು ನಾಯಕ, ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ, ಯಾದವ ಸಮುದಾಯದ ಪ್ರಮುಖರಾದ ಬಿ.ಎಸ್. ಶಿವಮೂರ್ತಿ, ವಿಪ್ರದ ನಾರಾಯಣಪ್ಪ, ಬಳ್ಳಾರಿ ರಾಮಚಂದ್ರಪ್ಪ, ಸಂಜೀವ ರಾಯುಡು, ರಾಮದಾಸ್, ಅವಲಕ್ಕಿ ಸೋಮಪ್ಪ, ಜಿ.ವೀರನಗೌಡ, ಬುರೆ ವಿರುಪಾಕ್ಷಿ, ಸೆರೆಗಾರ ವಿರುಪಾಕ್ಷಿ, ವಿಪ್ರದ ಭೀಮೇಶ, ಬುರೆನಾಗರಾಜ, ಬಳ್ಳಾರಿ ಮಾಧವ, ಜಯಪ್ರಕಾಶ ಚೌದ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.