ADVERTISEMENT

13 ಕೋವಿಡ್ ಪ್ರಕರಣಗಳು ಪತ್ತೆ: ತೋರಣಗಲ್ಲುಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 9:44 IST
Last Updated 5 ಜನವರಿ 2022, 9:44 IST
13 ಕೋವಿಡ್ ಪ್ರಕರಣಗಳು ಪತ್ತೆ: ತೋರಣಗಲ್ಲುಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ,
13 ಕೋವಿಡ್ ಪ್ರಕರಣಗಳು ಪತ್ತೆ: ತೋರಣಗಲ್ಲುಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ,   

ತೋರಣಗಲ್ಲು: ಹೋಬಳಿ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ 13 ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಟಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ತೋರಣಗಲ್ಲು ಗ್ರಾಮ-3, ಜಿಂದಾಲ್‌ ಸಂಸ್ಥೆಯ ವಿದ್ಯಾನಗರ-4, ಎನ್.ಎಂ.ಡಿ.ಸಿ - 5, ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿ - 1 ಪ್ರಕರಣಗಳು ಕಂಡುಬಂದಿವೆ.

" ತೋರಣಗಲ್ಲು ಗ್ರಾಮದಲ್ಲ 13 ಕೋವಿಡ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಜಿಲ್ಲೆಯಲ್ಲಿನ ಎಲ್ಲಾ ಜನರು ಕಡ್ಡಾಯವಾಗಿ ಮಾಸ್ಕನ್ನು ಧರಿಸತಕ್ಕದ್ದು ಹಾಗೂ ಪರಸ್ಪರ ಅಂತರವನ್ನು ಕಾಪಾಡಿ, ಕೋವಿಡ್ ನಿರ್ಮೂಲನೆಗೆ ಎಲ್ಲರೂ ಶ್ರಮಿಸಬೇಕು" ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.