ADVERTISEMENT

ಚಿಕ್ಕಕಬ್ಬಳ್ಳಿ: ದುರುಗಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:58 IST
Last Updated 29 ಜನವರಿ 2026, 5:58 IST
ಹರಪನಹಳ್ಳಿ ತಾಲ್ಲೂಕು ಚಿಕ್ಕ ಕಬ್ಬಳ್ಳಿಯಲ್ಲಿ ದುರುಗಮ್ಮದೇವಿ ಜಾತ್ರೆ ಸಡಗರ, ಸಂಭ್ರಮದಿಂದ ಜರುಗಿತು.
ಹರಪನಹಳ್ಳಿ ತಾಲ್ಲೂಕು ಚಿಕ್ಕ ಕಬ್ಬಳ್ಳಿಯಲ್ಲಿ ದುರುಗಮ್ಮದೇವಿ ಜಾತ್ರೆ ಸಡಗರ, ಸಂಭ್ರಮದಿಂದ ಜರುಗಿತು.   

ಹರಪನಹಳ್ಳಿ: ಪ್ರತಿ 13 ವರ್ಷಗಳಿಗೊಮ್ಮೆ ಜರುಗುವು ದುರುಗಮ್ಮ ದೇವಿ ಜಾತ್ರೆ ತಾಲ್ಲೂಕಿನ ಚಿಕ್ಕ ಕಬ್ಬಳ್ಳಿ ಗ್ರಾಮದಲ್ಲಿ ಸಡಗರ, ಸಂಭ್ರಮದಿಂದ ಬುಧವಾರ ಜರುಗಿತು.

ಮೂರು ದಿನ ನಡೆಯುವ ಜಾತ್ರೆಯು ಮಂಗಳವಾರ ದೇವಿಯ ಹೊಳೆ ಪೂಜೆಯ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆವೇರಿತು. ಫಲಪುಷ್ಪಗಳಿಂದ ಅಲಂಕರಿಸಲಾಗಿದ್ದ, ದೇವಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ಮೆರವಣಿಗೆ ಮಾಡಿದರು.

ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಅರಸೀಕೆರೆ ಪೂಜಾರ್ ಮರಿಯಪ್ಪ, ಕಬ್ಬಳ್ಳಿ ಪರಸಪ್ಪ, ಲಕ್ಷ್ಮಣ್ಣ, ರಾಮಪ್ಪ, ಸುಭಾಸಪ್ಪ, ಬಿರಂಜಿ ರಮೇಶ್, ಚಂದ್ರು ಗೌಡ್ರು, ಮಾದಿಹಳ್ಳಿ ಹನುಮಂತಪ್ಪ, ಮೈಲಪ್ಪ, ರಂಗಪ್ಪ, ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಮಂಜಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.