
ಪ್ರಜಾವಾಣಿ ವಾರ್ತೆ
ಇ.ಡಿ
ಬಳ್ಳಾರಿ: ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದ ನಿವಾಸಿ ಹಿತೇಶ್ ಜೈನ್ ಎಂಬುವವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಬೆಳಿಗ್ಗೆಯೇ ಹಿತೇಶ್ ಜೈನ್ ನಿವಾಸಕ್ಕೆ ತೆರಳಿದ್ದ ಇ.ಡಿ ಅಧಿಕಾರಿಗಳ ಒಂದು ತಂಡ ಪರಿಶೀಲನೆ ಆರಂಭಿಸಿತು ಎಂದು ಗೊತ್ತಾಗಿದೆ. ಹಿತೇಶ್ ಜೈನ್ ಹಿನ್ನೆಲೆ ಏನು, ಯಾವ ವೃತ್ತಿ ಅಥವಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.
ದಾಳಿಗೆ ನಿಖರವಾದ ಕಾರಣಗಳು ಗೊತ್ತಾಗಿಲ್ಲ. ಇ.ಡಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನೂ ನೀಡಿಲ್ಲ. ಭದ್ರತೆಗೆ ನೆರವನ್ನೂ ಕೋರಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯ ಬಳಿಯೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.