
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಆಹುತಿಯಾದ ಹುಲ್ಲಿನ ಬಣವೆಯ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ ಅಗ್ನಿಶಾಮಕ ದಳ
ತೆಕ್ಕಲಕೋಟೆ: ಸಮೀಪದ ಕರೂರು ಗ್ರಾಮದ ರೈತ ಹನುಮಂತಪ್ಪ ಇವರಿಗೆ ಸೇರಿದ ಮೂರು ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಣ್ಣ ನೇತೃತ್ವದ ತಂಡ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರು. ಈ ಕಾರ್ಯದಲ್ಲಿ ಜೆಸಿಬಿ ಬಳಸಿ ಬೆಂಕಿ ಇತರೆಡೆ ಹರಡದಂತೆ ಪ್ರಯತ್ನಿಸಲಾಯಿತು.
‘ಕರೂರು ಗಾಮದ ಬಡಿಗೇರ್ ತೋಟದ ರೈತ ಹನುಮಂತಪ್ಪ ಇವರಿಗೆ ಸೇರಿದ ಅಂದಾಜು ₹80 ಸಾವಿರ ಮೌಲ್ಯದ ಸುಮಾರು 25 ರಿಂದ 30 ಎಕರೆ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ್ದು ಬಣವೆಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ' ಎಂದು ಸಿರುಗುಪ್ಪ ಅಗ್ನಿಶಾಮಕ ಠಾಣಾಧಿಕಾರಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಶೇಕಾವಲಿ, ಲಿಂಗರಾಜು, ನಾಗರಾಜ, ಚಾಲಕ ಸಚಿನ, ತಂತ್ರಜ್ಞ ವಿಜಯ್ ಕುಮಾರ್ ಪಾಟೀಲ್ ಹಾಗೂ ಸಾಗರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.